ಅಲಂಕಾರು: ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಹಾಗೂ ವಿಕಲಚೇತನರ ಯುವ ಗ್ರಾಮಸಭೆ

(ನ್ಯೂಸ್ ಕಡಬ) newskadaba.com ಆಲಂಕಾರು, ಜ. 17. ಅಜಾದಿ ಕಾ ಅಮೃತಮಹೋತ್ಸವ ಹಾಗೂ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಶೇಷಚೇತನರ ಒಳಗೊಂಡ ಯುವ ಗ್ರಾಮಸಭೆಯು ಮಂಗಳವಾರದಂದು ಆಲಂಕಾರು ಗ್ರಾ.ಪಂ. ನಲ್ಲಿ ನಡೆಯಿತು.

ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ ಮಾತನಾಡಿ, ಗ್ರಾ.ಪಂ. ನ ಶೇ.5ರ ನಿಧಿಯಿಂದ ವಿಕಲಚೇತನರಿಗೆ ಸಾಧನಸಲಕರಣೆಗಳನ್ನು ಒದಗಿಸಲಾಗುವುದು ಎಂದರು. ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಡಬ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಅಕ್ಷತಾರವರು ಮಾತನಾಡಿ, ಕಡಬ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ಪ್ರತೀ ತಿಂಗಳ ಮಂಗಳವಾರದಂದು ವಿಕಲಚೇತನರ ವೈದ್ಯಕೀಯ ಶಿಬಿರ ನಡೆಯುತ್ತಿದ್ದು, ವಿಕಲಚೇತನರು ಇದರ ಪ್ರಯೋಜನ ಪಡೆಯುವಂತೆ ಸೂಚಿಸಿದರು. ಗುರುತಿನ ಚೀಟಿ ನವೀಕರಣ ಮಾಡಿ ಕಡ್ಡಾಯವಾಗಿ ಎಲ್ಲಾ ವಿಕಚೇತನರು ಯುಡಿಐಡಿ ಕಾರ್ಡ್ ಮಾಡುವಂತೆ ತಿಳಿಸಿದರು. ಪೆರಾಬೆ ಗ್ರಾ.ಪಂ. ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಮುತ್ತಪ್ಪರವರು ಮಾಹಿತಿ ನೀಡಿ ವಿಕಚೇತನರ ವಿವಾಹ ಪ್ರೋತ್ಸಾಹಧನ ಒಂದು ಲಕ್ಷ ರೂ. ಏರಿಕೆಯಾಗಿದೆ. ವಿದ್ಯಾರ್ಥಿ ವೇತನ ರಿಯಾಯಿತಿ ದರದ ಬಸ್ ಪಾಸ್, ಎಂಡೋ ವಿಕಚೇತನರ ಉಚಿತ ಬಸ್ ಪಾಸ್ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಗ್ರಾ.ಪಂ. ಅಧ್ಯಕ್ಷರಾದ ಸದಾನಂದ ಆಚಾರ್ಯ, ಉಪಾಧ್ಯಕ್ಷೆ ರೂಪಾ ಶ್ರೀ, ಸದಸ್ಯರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಆರ್ಯಾಪು ಗ್ರಾ.ಪಂ.ನ ಲಕ್ಷ್ಮೀಕಾಂತ್ ಹೆಗ್ಡೆ, ಉಪ್ಪಿನಂಗಡಿ ಗ್ರಾ.ಪಂ.ನ ಮಹೇಶ ಆಲಂಕಾರು, ಗ್ರಾ.ಪಂ. ಮೋನಪ್ಪ.ಬಿ. ಸಹಕರಿಸಿದರು. ಕಾರ್ಯದರ್ಶಿ ವಸಂತ ಶೆಟ್ಟಿ ಸ್ವಾಗತಿಸಿ, ಸಿಬ್ಬಂದಿಗಳಾದ ಕರಿಯಪ್ಪ, ವಸಂತ, ಗಿರಿಯಪ್ಪ, ಭವ್ಯ, ಹೇಮಾವತಿ, ಸುಶ್ಮಿತಾ, ವಿಕಚೇತನರು ಹಾಗೂ ಪೋಷಕರು ಉಪಸ್ಥಿತರಿದ್ದರು.

Also Read  ಕಡಬ: ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ನಂದಕುಮಾರ್ ಮಡಿಕೇರಿ ನೇಮಕ

 

 

 

error: Content is protected !!
Scroll to Top