ಆರು ತಿಂಗಳ ಕಾಲ ಶಿರಾಡಿ ಘಾಟ್ ಬಂದ್ ಮಾಡುವ ಅಗತ್ಯವಿಲ್ಲ..! ➤ ಮಂಜುನಾಥ್ ಭಂಡಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 17. ಕೇರಳ ರಾಜ್ಯದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರವು ನಿರಾಕರಿಸಿದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೇ ಜಿಲ್ಲಾಧಿಕಾರಿಗಳ ಮುಖಾಂತರ ಮತ್ತೆ ಅದೇ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿಯ ಜನರಿಂದ ಆರಾಧಿಸಲ್ಪಡುವ ಮತ್ತು ಗೌರವಿಸಲ್ಪಡುವ ನಾರಾಯಣ ಗುರುಗಳು ಗಾಂಧೀಜಿ, ರವೀಂದ್ರನಾಥ ಠಾಗೋರ್, ವಿವೇಕಾನಂದ ಮೊದಲಾದ ವ್ಯಕ್ತಿಗಳಿಂದ ಆದರ್ಶ ವ್ಯಕ್ತಿಯಾಗಿ ಬೆಳಗಿದವರು. ಕೇರಳವು ದೇಶದಲ್ಲೇ ಸಾಕ್ಷರತೆಯಲ್ಲಿ ಮುಂದಿರುವುದಕ್ಕೆ ನಾರಾಯಣ ಗುರುಗಳ ಶಿಕ್ಷಣ ಕ್ರಾಂತಿಯೇ ಕಾರಣ. ಈ ಹಿಂದೆಯೂ ಇದೇ ತರ ಸಂಸತ್ತಿನಲ್ಲಿ ನಾರಾಯಣ ಗುರುಗಳ ಭಾವಚಿತ್ರವನ್ನಿಡಲು ಶಿವಗಿರಿ ಮಾಡಿದ ಮನವಿಯನ್ನೂ ಸಹ ಕೇಂದ್ರ ನಿರಾಕರಿಸಿದೆ. ಇಂಥ ಮಹಾನ್ ಗುರುಗಳಿಗೆ ಕೇಂದ್ರವು ಅವಮಾನಿಸಿರುವುದು ತುಂಬ ನೋವು ತಂದಿದೆ ಎಂದು ಹರೀಶ್ ಕುಮಾರ್ ಹೇಳಿದರು.

Also Read  ವಿಧಾನಸಭೆಯಲ್ಲಿ ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ 4% ಮೀಸಲಾತಿ ಕೊಡುವ ಬಿಲ್‌ ಪಾಸ್

 

ಮೇಲ್ಮನೆ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಆರು ತಿಂಗಳ ಕಾಲ ಶಿರಾಡಿ ಘಾಟ್ ಬಂದ್ ಮಾಡುವ ಅಗತ್ಯವಿಲ್ಲ. ಶ್ರವಣಬೆಳಗೊಳದ 100 ಕಿ.ಮೀ ರಸ್ತೆಯ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಮುಗಿಸಿದ ಉದಾಹರಣೆ ಇದೆ. ಶಿರಾಡಿ ಘಾಟ್ ನ 10 ಕಿಮೀಗೆ 6 ತಿಂಗಳು ಬಂದ್ ಯಾಕೆ? ಹಾಗೆ ಬಂದ್ ಮಾಡಬಾರದು ಎಂದು ಅವರು ಮನವಿ ಮಾಡಿದರು.

Also Read  ವಿದ್ಯುತ್ ಅವಘಡ: ಲಕ್ಷಾಂತರ ರೂಪಾಯಿ ನೋಟುಗಳ ಜೊತೆ ಮನೆ ಸಂಪೂರ್ಣ ಭಸ್ಮ..!

 

 

error: Content is protected !!
Scroll to Top