ಉಪ್ಪಿನಂಗಡಿ: ಶೆಡ್ ನಲ್ಲಿ ನಿಲ್ಲಿಸಿದ್ದ ಬೈಕ್ ಕಳವುಗೈದು ಪರಾರಿಯಾಗುತ್ತಿದ್ದ ವೇಳೆ ಲಾರಿಗೆ ಢಿಕ್ಕಿ ➤ ಸವಾರ ಗಂಭೀರ..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 17. ಇಲ್ಲಿನ ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್ ‌ನಿವಾಸಿ ಮುಹಮ್ಮದ್ ಎಂಬವರು ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿಯ ಜೈನ ಬಸದಿ ಸಮೀಪದ ಮನೆಯೊಂದರಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕಳ್ಳರು ನಕಲಿ ಕೀ ಬಳಸಿ ಕಳವುಗೈದಿದ್ದು, ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು.


ಆದರೆ ಅಪರಿಚಿತ ಕಳ್ಳರು ಬೈಕ್ ಕದ್ದೊಯ್ದು ಪರಾರಿಯಾಗುತ್ತಿದ್ದ ವೇಳೆ ಬೈಕ್ ಶಿರಾಡಿ ಸಮೀಪದ ಅಡ್ಡಹೊಳೆ ಎಂಬಲ್ಲಿ ಲಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸವಾರನನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಅಪಘಾತಕ್ಕೀಡಾದ ಬೈಕ್ ನ ರಿಜಿಸ್ಟರ್ ನಂಬರ್ ಆಧಾರದಲ್ಲಿ ಮಾಲಕನನ್ನು ಪತ್ತೆಹಚ್ಚಿ ವಿಚಾರಿಸಿದಾಗ, ಮಾಲಕ ಮಹಮ್ಮದ್ ಅವರು ನಿಲ್ಲಿಸಿದ್ದ ಬೈಕ್ ನ್ನು ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ.

Also Read  ಸಂಪಾಜೆಯಲ್ಲಿ ಮತ್ತೆ ಭೂಕಂಪನ...!!

 

 

nt

error: Content is protected !!
Scroll to Top