ಪುತ್ತೂರು: ತಾಯಿಯನ್ನೇ ಅತ್ಯಾಚಾರಗೈದ ಪಾಪಿ ಪುತ್ರ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 15. ಹೆತ್ತಮ್ಮನನ್ನೇ ಬಲವಂತದಿಂದ ಅತ್ಯಾಚಾರಗೈದು ವಿಕೃತಿ ಮೆರೆದ ಆರೋಪಿ ಕೆದಂಬಾಡಿ ಗ್ರಾಮದ ಕುರಿಕ್ಕಾರು ನಿವಾಸಿ ಜಯರಾಮ ಎಂಬಾತನನ್ನು ಸಂತ್ರಸ್ತ ತಾಯಿಯು ನೀಡಿದ ದೂರಿನಂತೆ ಸಂಪ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ತಾಯಿಯೊಂದಿಗೆ ವಾಸವಾಗಿರುವ ಜಯರಾಮ ಜ.12ರಂದು ಎಂದಿನಂತೆ ರಾತ್ರಿ ಊಟ ಮಾಡಿ ರೂಮ್ ನಲ್ಲಿ ಮಲಗಿದ್ದ. ಮುಂಜಾನೆ 3 ಗಂಟೆಯ ವೇಳೆಗೆ ತಾಯಿ ಮಲಗಿದ್ದ ರೂಮ್ ಗೆ ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭ ಆಕೆ ಆತನನ್ನು ತಳ್ಳಿ ಬೊಬ್ಬೆ ಹಾಕಿದಾಗ ಆತ ತಾಯಿಯ ಬಾಯಿಗೆ ಬಟ್ಟೆ ತುರುಕಿ ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿ, ತಾಯಿ ಎಷ್ಟೇ ವಿರೋಧಿಸಿದರೂ ಬಲವಂತವಾಗಿ ಅತ್ಯಾಚಾರವೆಸಗಿದ್ದು, ಈ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಜ.13ರಂದು ಬೆಳಿಗ್ಗೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭ ಅಲ್ಲಿಗೆ ಬಂದ ಜಯರಾಮ ಬಲವಂತದಿಂದ ಅವರನ್ನು ಮನೆಯ ಹಾಲ್‌ಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿದೆ. ಈ ಕುರಿತಂತೆ ಸಂತ್ರಸ್ತ ಮಹಿಳೆಯು ಮಗ ಜಯರಾಮನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ಮರ್ಧಾಳ: ಚಲಿಸುತ್ತಿದ್ದ ಡಿಯೋ ವಾಹನದ ಹಿಂಬದಿ ಚಕ್ರ ಸ್ಫೋಟ ➤ ಸವಾರ ಅಪಾಯದಿಂದ ಪಾರು

 

 

 

error: Content is protected !!
Scroll to Top