ಕಡಬ: ವಿವಿಧ ಶಾಲಾ- ಕಾಲೇಜುಗಳಲ್ಲಿ ಮಾದಕ ವಸ್ತು ತಡೆ ಹಾಗೂ ಜಾಗೃತಿ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ಜ. 13. ಸಮಾಜಕ್ಕೆ ಮಾರಕವಾಗಿರುವ ಮಾದಕ ದ್ರವ್ಯಗಳ ಸೇವನೆ, ಮಾದಕ ವಸ್ತು ಮಾರಾಟದ ವಿರುದ್ಧ ಜಾಗೃತಿ ಕಾರ್ಯಕ್ರಮವು ಕಡಬ ಠಾಣಾ ಎಸ್.ಐ ನೇತೃತ್ವದಲ್ಲಿ ರಾಮಕುಂಜೇಶ್ವರ ಪದವಿ ಕಾಲೇಜು, ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ರಾಮಕುಂಜ, ಆಯಿಶಾ ಸ್ಕೂಲ್ ಆತೂರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆನೇರಂಕಿಯಲ್ಲಿ ನಡೆಯಿತು.

ಪೊಲೀಸ್ ಇಲಾಖೆಯು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತಾಲೂಕಿನಾದ್ಯಂತ ಮಾದಕ ವಸ್ತುಗಳನ್ನು ನಿಷೇಧಿಸಲು ಪಣತೊಟ್ಟಿದೆ ಎಂದು ಎಸ್.ಐ ರುಕ್ಮ ನಾಯ್ಕ್ ಹೇಳಿದರು. ಸಾರ್ವಜನಿಕರು, ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರು ಸಮೇತ ಕಿತ್ತೆಗೆಯಬಹುದು. ಹೀಗಾಗಿ ಮಾದಕ ವಸ್ತುಗಳ ಪತ್ತೆಗಾಗಿ ಪೊಲೀಸರೊಂದಿಗೆ ಕೈಜೋಡಿಸುವಂತೆ ವಿನಂತಿಸಿದರು. ಸಂದರ್ಭದಲ್ಲಿ ಕಡಬ ಠಾಣೆಯ ಸಿಬ್ಬಂದಿಗಳು, ಮುಖ್ಯ ಪೊಲೀಸ್ ಕಾನ್ಸ್‌ಟೇಬಲ್ ಗಳು, ಶಾಲಾ- ಕಾಲೇಜುಗಳ ಮಕ್ಕಳು, ಶಿಕ್ಷಕರು ಮೊದಲಾದವರು ಭಾಗವಹಿಸಿದ್ದರು.

Also Read  ಮುರುಡೇಶ್ವರದಲ್ಲಿ ಜಾನುವಾರು ಕಳ್ಳತನ ಯತ್ನ ➤ ಓರ್ವನ ಬಂಧನ ,ನಾಲ್ವರು ಪರಾರಿ

 

error: Content is protected !!
Scroll to Top