ಮಂಗಳೂರು: ಮೊಬೈಲ್ ಕಳ್ಳತನ ➤ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಮೊಬೈಲ್‌ ಕಸಿದು ಪರಾರಿಗೆತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಓರ್ವ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಹರೀಶ್ ಪೂಜಾರಿ ಹಾಗೂ ಇನ್ನೋರ್ವ ಶಮಂತ್‌ (20) ಎಂದು ಗುರುತಿಸಲಾಗಿದೆ. ಆರೊಪಿಗಳಿಬ್ಬರು ನೆಹರೂ ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯೋರ್ವರ ಮೊಬೈಲ್ ಕದ್ದು ಪರಾರಿಗೆ ಯತ್ನಿಸುತ್ತಿದ್ದ ವೇಳೆ ನೀರುಮಾರ್ಗದ ಹರೀಶ್‌ ಪೂಜಾರಿ ಎಂಬಾತನನ್ನು ಬೆನ್ನಟ್ಟಿ ಹಿಡಿದಿದ್ದು ಈ ವೇಳೆ ಮತ್ತೋರ್ವ ಆರೋಪಿ ರಾಜೇಶ್‌‌ ಪರಾರಿಯಾಗಿದ್ದು, ಆತನನ್ನೂ ಬಂಧಿಸಲಾಗಿದೆ. ಆರೋಪಿಗಳನ್ನು ತನಿಖೆ ನಡೆಸಿದ ಸಂದರ್ಭ ತಂಡದಲ್ಲಿ 4-5 ಜನ ಇರುವುದಾಗಿ ತಿಳಿದುಬಂದಿದೆ.

Also Read  ಬಾಳಿಲದಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್

 

error: Content is protected !!
Scroll to Top