ಮಂಗಳೂರು: ಮೊಬೈಲ್ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸ್..! ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಮೊಬೈಲ್ ಕದ್ದೊಯ್ದು ಪರಾರಿಯಾಗಲೆತ್ನಿಸುತ್ತಿದ್ದ ಯುವಕನೋರ್ವನನ್ನು ಕಂಡ ಪೊಲೀಸ್ ಸಿನಿಮೀಯ ಶೈಲಿಯಲ್ಲಿ ಆತನನ್ನು ಬೆನ್ನಟ್ಟಿ ಹಿಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ನೆಹರೂ ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದುದನ್ನು ಕಂಡ ಸ್ಥಳೀಯರು ಹಾಗೂ ಪೊಲೀಸರು ಬೆನ್ನಟ್ಟಿದ್ದು, ಕೊನೆಗೆ ಪೊಲೀಸ್ ಓರ್ವರು ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮರ್ಧಾಳ: ಮೂರು ತಿಂಗಳ ಹಿಂದೆ ಮನೆ ಕಳ್ಳತನ ಪ್ರಕರಣ ➤ ಓರ್ವ ಆರೋಪಿಯ ಬಂಧನ

 

 

error: Content is protected !!
Scroll to Top