ಹಾಸನದ ಉದ್ಯಮಿ ಬೆಳ್ತಂಗಡಿ ಲಾಡ್ಜ್ ನಲ್ಲಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 13. ತೆಗೆದುಕೊಂಡ ಸಾಲ ತೀರಿಸಲಾಗದೇ ಮನನೊಂದ ಹಾಸನ ಮೂಲದ ಉದ್ಯಮಿಯೋರ್ವರು ಕಕ್ಕಿಂಜೆ ಲಾಡ್ಜ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಯನ್ನು ಹಾಸನ ಜಿಲ್ಲೆಯ ಬೇಲೂರು ನಿವಾಸಿ ಕುಮಾರ್ ಎಂ.ಎಸ್ ಎಂದು ಗುರುತಿಸಲಾಗಿದೆ. ಇವರು ಜ. 11ರಂದು ತನ್ನ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೋದವರು ಹಿಂತಿರುಗಲಿಲ್ಲ. ಬಳಿಕ ಬುಧವಾರದಂದು ಸುಮಾರು ಎಂಟು ಗಂಟೆಯ ವೇಳೆ ಪತ್ನಿಗೆ ಕರೆ ಮಾಡಿ ತಾನು ಧರ್ಮಸ್ಥಳದಿಂದ 10 ಕಿ.ಮೀ ದೂರದಲ್ಲಿರುವುದಾಗಿ ತಿಳಿಸಿದ್ದರು. ಇದರಿಂದ ಅನುಮಾನಗೊಂಡ ಪತ್ನಿ ಹಾಗೂ ಸ್ನೇಹಿತರು ಧರ್ಮಸ್ಥಳದ ಕಡೆ ಹುಡುಕಾಡುತ್ತಾ ಬಂದಾಗ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿನ ವಸತಿಗೃಹದ ಮುಂದೆ ಕುಮಾರ್ ಅವರ ಬೈಕ್ ಪತ್ತೆಯಾಗಿದೆ. ವಸತಿ ಗೃಹ ಸಿಬ್ಬಂದಿಯನ್ನು ವಿಚಾರಿಸಿದಾಗ ಕುಮಾರ್ ಕೊಠಡಿ ಪಡೆದುಕೊಂಡ ಬಗ್ಗೆ ಮಾಹಿತಿ ದೊರೆತಿದ್ದು, ವಸತಿಗೃಹದ ಮೇಲ್ವಿಚಾರಕರೊಂದಿಗೆ ಹೋಗಿ ನೋಡಿದಾಗ ಕುಮಾರ್ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಕುಮಾರ್ ಅವರ ಅಣ್ಣ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  8 ತಿಂಗಳ ಕಂದಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಕ್ರೂರಿ ತಾಯಿ..! ➤ "ಮಗುವಲ್ಲ ಕುರಿ" ಎಂದು ಕೊಲೆಗೈದಳು..‼️

 

 

error: Content is protected !!
Scroll to Top