ಶಕ್ತಿ ನಗರ ವಿದ್ಯಾಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 12. ಸ್ವಾಮಿ ವಿವೇಕಾನಂದರು ದೇಶದ ಶಕ್ತಿ ಅವರು ಯುವ ಜನತೆಗೆ ಸ್ಫೂರ್ತಿಯಾಗಿದ್ದರು. ಅಂತಹ ಚೇತನವನ್ನು ಬದುಕಿನಲ್ಲಿ ಸ್ಮರಿಸಬೇಕು ಎಂದು ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಶ್ರೀ ಕರುಣಾಕರ ಬಲ್ಕೂರುರವರು ಹೇಳಿದರು.

ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ಬುಧವಾರ ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ದೀಪ ಬೆಳಗಿಸಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಧನೆ ಎಂಬುದು ಕೇವಲ ಒಂದು ದಿನದ ಪ್ರಯತ್ನವಲ್ಲ, ಅದಕ್ಕಾಗಿ ಸತತ ಕಠಿಣ ಪರಿಶ್ರಮವನ್ನು ಮಾಡಿದರೆ ಗುರಿ ಸಾಧಿಸಬಹುದು. ಆತ್ಮಸ್ಥೈರ್ಯ ಒಂದಿದ್ದರೆ ಅಸಾಧ್ಯವಾದ್ದುದ್ದನ್ನು ಕೂಡಾ ಸಾಧ್ಯವಾಗಿಸಬಹುದು ಎಂದು ನೆಪೋಲಿಯನ್ನನ ಸ್ಫೂರ್ತಿದಾಯಕ ಕಥೆಯ ಮೂಲಕ ಮಕ್ಕಳಿಗೆ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ಪ್ರೇರಣೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಶಕ್ತಿ ವಿದ್ಯಾಸಂಸ್ಥೆಯ ಸಂಯೋಜಕರಾದ ಪೃಥ್ವಿರಾಜ್‍ರವರು ಹತ್ತನೇ ಮತ್ತು ದ್ವಿತೀಯ ಪದವಿ ಪೂರ್ವ ಮಕ್ಕಳನ್ನುದ್ದೇಶಿಸಿ ಮುಂಬರುವ ಪರೀಕ್ಷೆ ಎಂಬ ಗುರಿಯನ್ನು ಸಾಧಿಸುವುದಕ್ಕಾಗಿ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಶಿಕ್ಷಣ ಹಾಗೂ ಯೋಗದ ಮೂಲಕ ಹಿರಿಯರಿಗೆ ಹಾಗೂ ನಮ್ಮ ದೇಶಕ್ಕೆ ಗೌರವವನ್ನು ತರುವಂಥ ಸಾಧಕರಾಗಬೇಕು. ಪ್ರತಿಭಾ ಪಲಾಯನ ಆಗದೆ ನಮ್ಮ ತಾಯಿಗೆ ನೀಡುವ ಗೌರವವನ್ನೇ ದೇಶಕ್ಕೆ ನೀಡಬೇಕು. ಆ ಮೂಲಕ ಸ್ವಾಮಿ ವಿವೇಕಾನಂದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

Also Read  214ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ - ವಿದ್ಯಾರ್ಥಿಗಳಿಗೆ ಉಚಿತ ಪ್ರದರ್ಶನ

ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಯಕ್ ಮುಖ್ಯ ಅತಿಥಿಯಾಗಿದ್ದರು. ಸಂಯೋಜನಾಧಿಕಾರಿ ಪೃಥ್ವಿರಾಜ್ ಅಧ್ಯಕ್ಷತೆ ವಹಿಸಿದ್ದರು. ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಹ ಸಂಯೋಜಕಿ ನೀಮಾ ಸಕ್ಸೇನಾ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಮತ್ತು ಶಿಕ್ಷಕ-ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Also Read  ಬಸ್- ಟ್ರ್ಯಾಕ್ಟರ್ ಢಿಕ್ಕಿ: 15 ಕ್ಕೂ ಅಧಿಕ ಮಂದಿಗೆ ಗಾಯ

 

 

error: Content is protected !!
Scroll to Top