(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 11. ರಾಜ್ಯದಾದ್ಯಂತ ಆರೋಗ್ಯ ಇಲಾಖೆ ನೀಡುತ್ತಿರುವ ಕೊರೋನಾ ವರದಿಯ ಪ್ರಕಾರ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದ್ದು, ಈ ಹಿನ್ನೆಲೆ ರಾಜ್ಯ ಸರಕಾರ ಹೆಚ್ಚುವರಿ ನಿಯಂತ್ರಣವನ್ನು ಜಾರಿಗೊಳಿಸಿದೆ.
ಈ ಕುರಿತು ಸಿಎಂ ವರ್ಚುವಲ್ ಮೀಟಿಂಗ್ ನಡೆಸಿದ್ದು, ಸರಕಾರದ ನಿರ್ಧಾರದ ಪ್ರಕಾರ ರಾಜ್ಯದಾದ್ಯಂತ ಎಲ್ಲಾ ರೀತಿಯ ಪ್ರತಿಭಟನೆ, ಧರಣಿ ಮೊದಲಾದವುಗಳನ್ನು ನಿಷೇಧಿಸಿದ್ದು, ಇದು ಜ. 31ರ ವರೆಗೆ ಇರಲಿದೆ. ಇನ್ನು ಶಾಲೆಗಳನ್ನು ಮುಚ್ಚುವ ನಿರ್ಧಾರದ ಕುರಿತು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಈ ಹಿಂದಿನ ಆದೇಶವೇ ಜಾರಿಯಲ್ಲಿರಲಿದೆ. ತೆರೆದ ಸ್ಥಳಗಳಲ್ಲಿ 200 ಮಂದಿ ಹಾಗೂ ಒಳಾಂಗಣದಲ್ಲಿ 100 ಮಂದಿಗೆ ಮಾತ್ರ ಅವಕಾಶ ಎಂದು ಹೇಳಿದರು.