ಪುತ್ತೂರು: ಅಪ್ರಾಪ್ತ ಬಾಲಕಿಯ ತಬ್ಬಿಹಿಡಿದ ಭೂಪ ಬಾತ್ ರೂಂ ಕಿಟಕಿಗೂ ಕ್ಯಾಮೆರಾ ಇಟ್ಟ…! ➤ ಫೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 12. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಮಹಿಳೆಯೋರ್ವರು ನೀಡಿದ ದೂರಿನಂತೆ ಆರೋಪಿಯ ವಿರುದ್ದ ಫೋಕ್ಸೋ ಪ್ರಕರಣ ದಾಖಲಾಗಿದೆ.

ಆರೋಪಿ ಬೆಳ್ತಂಗಡಿ ತಾಲೂಕಿನ ಕಳಂಜಿಬೈಲ್ ನಿವಾಸಿ ನಾಸಿರ್ ಅಲಿಯಾಸ್ ಸುನಾಮಿ ನಾಸಿರ್ ಎಂದು ಗುರುತಿಸಲಾಗಿದೆ. ಈತ ಜ. 6ರಂದು ದೂರುದಾರ ಮಹಿಳೆಯ ಅಪ್ರಾಪ್ತ ಮಗಳು ಮನೆಯ ಹೊರಗಡೆ ನಿಂತಿದ್ದ ವೇಳೆ ಆರೋಪಿ ಆಕೆಯ ಬಳಿ ಬಂದು 500 ರೂ. ಹಾಗೂ ಮೊಬೈಲ್ ಕೈಗೆ ನೀಡಿ ಆಕೆಯನ್ನು ತಬ್ಬಿಕೊಂಡು ಆಕೆಯ ಎದೆಭಾಗಕ್ಕೆ ಕೈ ಹಾಕಿದ್ದಾನೆ ಎನ್ನಲಾಗಿದೆ. ಐನೂರು ರೂ. ನೋಟಿನಲ್ಲಿ Pizza ISU ಹೃದಯದ ಚಿತ್ರ ಹಾಗೂ NM I love u(Nande marakanda) ಎಂದು ಬರೆದಿದ್ದ ಎಂದೆನ್ನಲಾಗಿದೆ. ಅಲ್ಲದೇ ಈ ವೇಳೆ ದೂರುದಾರ ಮಹಿಳೆ ಅಲ್ಲಿಗೆ ಬಂದಾಗ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಗಳನ್ನು ಮದುವೆ ಮಾಡಿಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂದರ್ಭ ಮಹಿಳೆ ಕಿರುಚಿದಾಗ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Also Read  ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌

ಎರಡು ದಿನಗಳ ಬಳಿಕ ಎರಡು ಗಂಟೆಯ ವೇಳೆಗೆ ಮಹಿಳೆ ಬಾತ್ ರೂಂ. ಹೋಗಿದ್ದು, ಈ ವೇಳೆ ಬಾತ್ ರೂಂ ಕಿಟಕಿಯ ಮೂಲಕ ಯಾರೋ ನಿಂತು ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ಕಂಡು ಮಹಿಳೆ ಕಿರುಚಿದಾಗ ಆರೋಪಿ ನಾಸಿರ್ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.

Also Read  ಉಪ್ಪಿನಂಗಡಿ: ವಿದ್ಯಾರ್ಥಿಗೆ ಹಲ್ಲೆ ಆರೋಪ - ಶಿಕ್ಷಕನ ವಿರುದ್ದ ದೂರು ದಾಖಲು

 

error: Content is protected !!
Scroll to Top