(ನ್ಯೂಸ್ ಕಡಬ) newskadaba.com ಮಂಗಳೂರು, ಜ.11. ಕರಾವಳಿಯಲ್ಲಿ ಕೊರೋನ ಸೋಂಕು ಮತ್ತೆ ಹೆಚ್ಚಳವಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 583 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಒಟ್ಟು 1872 ಆ್ಯಕ್ಟಿವ್ ಪ್ರಕರಣಗಳಿದ್ದು, ಇಂದಿನ ಪಾಸಿಟಿವಿಟಿ ದರ 5.73% ಕ್ಕೆ ಏರಿಕೆಯಾಗಿದೆ. ಇಂದು 94 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 1705 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.