ರಾಜ್ಯದಾದ್ಯಂತ ಸದ್ಯಕ್ಕೆ ಶಾಲೆಗಳನ್ನು ಮುಚ್ಚುವ ಪ್ರಸ್ತಾಪವಿಲ್ಲ..! ➤ ಸಚಿವ ನಾಗೇಶ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 11. ಕೋವಿಡ್ ಸೋಂಕು ಶಾಲೆಗಳಿಂದ ಹರಡುತ್ತದೆ ಎಂದು ಎಲ್ಲೂ ಪ್ರಸ್ತಾಪವಿಲ್ಲ. ಹೀಗಾಗಿ ರಾಜ್ಯವ್ಯಾಪಿ ಶಾಲೆಗಳನ್ನು ಮುಚ್ಚುವ ಪ್ರಸಂಗವೇ ಇಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬೆಂಗಳೂರು ನಗರದಾದ್ಯಂತ ಕೊರೋನ ಸೋಂಕು ಹೆಚ್ಚಳವಾದುದರಿಂದ ಅಲ್ಲಿ ಮಾತ್ರ ಶಾಲೆಗಳನ್ನು ಬಂದ್ ಮಾಡಿದ್ದೇವೆ. ಆದರೆ ರಾಜ್ಯದ ಇತರ ಭಾಗಗಳಲ್ಲಿ ಈ ಪರಿಸ್ಥಿತಿ ಇಲ್ಲ. ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಆಫ್ಲೈನ್ ತರಗತಿ ಸ್ಥಗಿತಗೊಳಿಸಿ ಆನ್ಲೈನ್ ತರಗತಿ ನಡೆಸುತ್ತೇವೆ. ಇನ್ನು ತಾಲೂಕು ಮಟ್ಟದಲ್ಲಿ ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆಯನ್ನು ಮುಚ್ಚುವುದರ ಕುರಿತು ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಶಾಲೆಗಳಿಂದ ಕೊರೋನಾ ಹರಡುತ್ತದೆ ಎಂದು ಎಲ್ಲೂ ವರದಿ ತಿಳಿಸಿಲ್ಲ ಎಂದು ಹೇಳಿದರು.

Also Read  ₹ 47,000 ದಾಟಿದ ಅಡಿಕೆ ಧಾರಣೆ

error: Content is protected !!
Scroll to Top