ವಿಟ್ಲ: ಮದುಮಗನಿಂದ ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ ➤ ಇಬ್ಬರ ಬಂಧನ, ಪ್ರಮುಖ ಆರೋಪಿ ಮದುಮಗ ನಾಪತ್ತೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ.11. ವಿಟ್ಲದ ಸಾಲೆತ್ತೂರಿನಲ್ಲಿ ಕೊರಗಜ್ಜ ದೈವಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ‌ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ನಿವಾಸಿ, ಪುತ್ತೂರಿನ ಫಾತಿಮಾ ಮ್ಯಾಚಿಂಗ್ ಸೆಂಟರ್ ನ ಮಾಲಕ ಅಹಮ್ಮದ್ ಮುಜ್ತಾಬ್(28) ಹಾಗೂ ಮಂಜೇಶ್ವರ ತಾಲೂಕಿನ ಬಾಯಾರು ಪದವು ನಿವಾಸಿ ಮೊಯ್ದೀನ್ ಮನೀಶ್(19) ಎಂದು ಗುರುತಿಸಲಾಗಿದೆ. ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಲ್ ಅಗರ್ತಿಮೂಲೆ ಸಮೀಪದ ಉಮರುಲ್ ಭಾಷಿತ್ ಎಂ ಎಂಬವರ ಜತೆ ಜ. 6 ರಂದು ನಡೆದಿತ್ತು. ಅದೇ ದಿನ ರಾತ್ರಿ ಸಾಲೆತ್ತೂರಿನ ಮದುಮಗಳ ಮನೆಯಲ್ಲಿ ನಡೆದ ಔತಣ ಕೂಟದಲ್ಲಿ ಮದುಮಗ ಭಾಷಿತ್ ಕೊರಗಜ್ಜನ ಮಾದರಿಯ ವೇಷ ದರಿಸಿ ಕುಣಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆಯ ವತಿಯಿಂದ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಅದರಂತೆ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಕೊರಗಜ್ಜನ ವೇಷ ಧರಿಸಿದ ಆರೋಪಿ ಮದುಮಗ ಭಾಷಿತ್ ತಲೆಮರೆಸಿಕೊಂಡಿದ್ದಾನೆ.

Also Read  ಕರ್ನಾಟಕದ ಬೀಚ್ ಗಳಲ್ಲಿ ಟೆಂಟ್-ಮದ್ಯಪಾನ ಪಾರ್ಟಿಗೆ ಅವಕಾಶ-ಶೀಘ್ರ ತೀರ್ಮಾನ

 

 

error: Content is protected !!
Scroll to Top