ವಿಟ್ಲ: ಮದುಮಗನಿಂದ ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ ➤ ಆರೋಪಿಯ ಪರ ನಿಂತ ಬಿಜೆಪಿ ಯುವ ಮುಖಂಡ ಪಕ್ಷದಿಂದ ಸಸ್ಪೆಂಡ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.10. ಇತ್ತೀಚೆಗೆ ಮುಸ್ಲಿಂ ಮದುಮಗನೋರ್ವ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ಘಟನೆ ನಡೆದಿದ್ದು, ಪ್ರಕರಣದ ಆರೋಪಿಯ ಬೆನ್ನಿಗೆ ನಿಂತ ಬಿಜೆಪಿ ಮುಖಂಡನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ವಿಟ್ಲದಲ್ಲಿ ನಡೆದ ಮದುವೆಯೊಂದರಲ್ಲಿ ಮದುಮಗನೋರ್ವ ಕೊರಗಜ್ಜನ ವೇಷ ಧರಿಸಿ ಅವಹೇಳಿಸಿದ ಬಗ್ಗೆ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆ ಹಾಗೂ ಮುಸ್ಲಿಮ್ ಸಂಘಟನೆಯಿಂದ ಖಂಡನೆ ವ್ಯಕ್ತವಾಗಿತ್ತಲ್ಲದೆ ಧಾರ್ಮಿಕ ಮುಖಂಡರು ಬಹಿರಂಗವಾಗಿ ಘಟನೆಯನ್ನು ಖಂಡಿಸಿದ್ದರು. ಈ ನಡುವೆ ಪ್ರಕರಣದ ಆರೋಪಿಯ ಪರ ವಹಿಸಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಯುವ ಮುಖಂಡ, ಪಜೀರು ಗ್ರಾಮದ 109 ಸಾಂವಾರ್ ತೋಟ ಬೂತ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ವಿಟ್ಲ ಠಾಣೆಗೆ ಬಂದು ವಕಾಲತ್ತು ವಹಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣದಿಂದ ಪಕ್ಷದಿಂದ ಉಚ್ಛಾಟಿಸಿರುವುದಾಗಿ ತಿಳಿದುಬಂದಿದೆ.

Also Read  ಮಂಗಳೂರು: ಕೊಲೆಯತ್ನ ➤‌ ಓರ್ವನ ಸ್ಥಿತಿ ಚಿಂತಾಜನಕ

 

 

error: Content is protected !!
Scroll to Top