ಇಂದಿನಿಂ‌ದ ದೇಶಾದ್ಯಂತ “ಬೂಸ್ಟರ್ ಡೋಸ್” ಲಸಿಕೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 10. ದೇಶದಾದ್ಯಂತ ಈಗಾಗಲೇ 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಇದರ ನಡುವೆ ಇಂದಿನಿಂದ ಪ್ರಿಕಾಷನ್ ಡೋಸ್ ನೀಡಲು ಕೇಂದ್ರ ಸರಕಾರ ಮುಂದಾಗಿದ್ದು, ಆರೋಗ್ಯ ಸಿಬ್ಬಂದಿ, ಕೋವಿಡ್ ನಿಯಂತ್ರಣದ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಡೋಸ್ ನೀಡಿಕೆ ಆರಂಭವಾಗಿದ್ದು, ಇದಕ್ಕಾಗಿ ಶುಕ್ರವಾರದಿಂದಲೇ ಕೋವಿನ್ ವೆಬ್ ಸೈಟ್ ನಲ್ಲಿ ನೋಂದಣಿ ಕೂಡಾ ಆರಂಭವಾಗಿದೆ.

ಡಿ. 25ರಂದು ಈ ಕುರಿತು ಮಾತನಾಡಿದ ಪ್ರಧಾನಿ ಮೋದಿಯವರು, 15-18 ವರ್ಷ ವಯಸ್ಸಿನ ಮಕ್ಕಳಿಗೆ ಹಾಗೂ ಆರೋಗ್ಯ ಸಿಬ್ಬಂದಿ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಪ್ರಿಕಾಷನ್ ಡೋಸ್ ನೀಡುವುದಾಗಿ ಘೋಷಿಸಿದ್ದರು. ಅದರಂತೆಯೇ ಇಂದಿನಿಂದ ಬೂಸ್ಟರ್ ಡೋಸ್ ಗೆ ಚಾಲನೆ ಸಿಗಲಿದೆ.

Also Read  ಸಹಕಾರ ಭಾರತಿ ವತಿಯಿಂದ ಜ.19ರಂದು ಬೃಹತ್ ಪ್ರತಿಭಟನೆ

 

ವೈದ್ಯಕೀಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟ ಪೂರ್ವ ರೋಗಪೀಡಿತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಡೋಸ್ ಪಡೆದು 9 ತಿಂಗಳು ಅಥವಾ 39 ವಾರ ಆಗಿರಬೇಕು, ಅಂತವರು ಬೂಸ್ಟರ್ ಡೋಸ್ ಗೆ ಅರ್ಹರಾಗಿರುತ್ತಾರೆ. ಮೊದಲಿನ ಎರಡು ಡೋಸ್ ಯಾವ ಕಂಪನಿಯದ್ದಾಗಿರುತ್ತೋ, ಅದೇ ಕಂಪನಿಯ ಲಸಿಕೆಯನ್ನೇ ಮೂರನೇ ಡೋಸ್ ಆಗಿ ಪಡೆಯಬೇಕು.

 

error: Content is protected !!
Scroll to Top