ಬಂಟ್ವಾಳ: ಮರ ಕಡಿಯುತ್ತಿದ್ದ ವ್ಯಕ್ತಿಯ ಮೇಲೆಯೇ ಉರುಳಿಬಿದ್ದ ಮರ ➤ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 10. ತೆಂಗಿನಮರ ಕಡಿಯುತ್ತಿದ್ದ ಯುವಕನ ಮೇಲೆಯೇ ಮರಬಿದ್ದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಶಂಭೂರು ಗ್ರಾಮದ ನಾಯಿಲದಲ್ಲಿ ನಡೆದಿದೆ.

ಮೃತ ಯುವಕನನ್ನು ನಾಯಿಲ ಬೆಟ್ಟುಗದ್ದೆ ನಿವಾಸಿ ದಿ.ಪೂವಪ್ಪ ಪೂಜಾರಿ ಅವರ ಪುತ್ರ ಯತಿರಾಜ್ (37) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ವ್ಯಕ್ತಿಯೋರ್ವರ ತೋಟದಲ್ಲಿ ತೆಂಗಿನಮರ ಕಡಿಯುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದ್ದು, ತಕ್ಷಣವೇ ಅವರನ್ನು ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ.

Also Read  ಬಸ್ ನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 1.95 ಲಕ್ಷ ರೂ. ನಗದು ವಶಕ್ಕೆ

 

error: Content is protected !!
Scroll to Top