ಅನ್ವಾರುಲ್ ಹುದಾ ಶಾದಿಮಹಲ್ ಕಟ್ಟಡಕ್ಕೆ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಅವರಿಂದ 5 ಲಕ್ಷ ರೂ. ಅನುದಾನ ಬಿಡುಗಡೆ

(ನ್ಯೂಸ್ ಕಡಬ) newskadaba.com ಅರಂತೋಡು, ಜ. 10. ಅರಂತೋಡು ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಶನ್(ರಿ) ಅದೀನದಲ್ಲಿರುವ ಅಪೂರ್ಣಗೊಂಡ ಅನ್ವಾರುಲ್ ಹುಧಾ ಶಾದಿಮಹಲ್ ಕಟ್ಟಡಕ್ಕೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ರವರು ತಮ್ಮ ವಿಧಾನ ಪರಿಷತ್ ಪ್ರದೇಶಾಭಿವೃದ್ಧಿ ನಿಧಿಯಿಂದ 5ಲಕ್ಷ ರೂಪಾಯಿ ಅನುದಾನವನ್ನು ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ. ಎಂ.ಶಹೀದ್ ತೆಕ್ಕಿಲ್ ರವರ ಶಿಫಾರಸ್ಸಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ.


ಕಾಂಗ್ರೆಸ್ ಮುಖಂಡರಾದ ಟಿ. ಎಂ.ಶಹೀದ್ ತೆಕ್ಕಿಲ್ ರವರು ಶಾದಿಮಹಲ್ ಕಟ್ಟಡ ಪ್ರಾರಂಭಿಸಲು ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರೂ. 20 ಲಕ್ಷ ಅನುದಾನ, ರಾಜ್ಯ ಸಭಾ ಸದಸ್ಯ ದಿವಂಗತ ಆಸ್ಕರ್ ಫೆರ್ನಾಂಡಿಸ್ ರವರು ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 10 ಲಕ್ಷ ಅನುದಾನ, ವಿಧಾನ ಪರಿಷತ್ ಸದಸ್ಯ ಎಚ್. ಎಂ. ರೇವಣ್ಣರವರು ತಮ್ಮ ವಿಧಾನಪರಿಷತ್ ಪ್ರದೇಶಾಭಿವೃದ್ಧಿಯಿಂದ 3 ಲಕ್ಷ ಅನುದಾನವನ್ನು ಒದಗಿಸಿ ಕೊಟ್ಟಿರುತ್ತಾರೆ.

Also Read  ಪ್ರತಿ ಕಂಬಳಕ್ಕೂ 5 ಲ.ರೂ. ನೀಡಲು ರಾಜ್ಯ ಸರ್ಕಾರ ಆದೇಶ

ನಮ್ಮ ಸಂಸ್ಥೆಗೆ ಸುಮಾರು 20ವರ್ಷಗಳ ಹಿಂದೆ ಸ್ಥಳ ಮಂಜೂರಾತಿ ಮಾಡಿಸಿಕೊಟ್ಟಿರುವ ಮತ್ತು ಲಕ್ಷಗಟ್ಟಲೆ ಅನುದಾನವನ್ನು ಬಿಡುಗಡೆಗೊಳ್ಳಲು ಶ್ರಮಿಸಿದ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್(ರಿ) ಇದರ ಗೌರವಾಧ್ಯಕ್ಷರು, ಪೇರಡ್ಕ ಮುಹಿಯಿದ್ದೀನ್ ಜುಮಾ ಮಸೀದಿಯ ಗೌರವಾಧ್ಯಕ್ಷರು, ಅರಂತೋಡು ಮಸೀದಿ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರು, ಮತ್ತು ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯರು ಆದ ಟಿ. ಎಂ. ಶಹೀದ್ ತೆಕ್ಕಿಲ್ ಅವರನ್ನು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್(ರಿ) ಅಧ್ಯಕ್ಷರಾದ ಅಬ್ದುಲ್ ಮಜೀದ್ ಹಾಗೂ ಮಾಜಿ ಅಧ್ಯಕ್ಷರಾದ ಎ.ಹನೀಫ್ ಅಭಿನಂದಿಸಿದ್ದಾರೆ.

Also Read  ಗೃಹರಕ್ಷಕರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ

 

error: Content is protected !!
Scroll to Top