ಮೇಕೆದಾಟು “ನೀರಿಗಾಗಿ ನಡಿಗೆ” ಪಾದಯಾತ್ರೆಗೆ ಸುಳ್ಯದ ಕಾಂಗ್ರೆಸ್ ಪ್ರಮುಖರಿಂದ ಪಯಸ್ವಿನಿ ನದಿಗೆ ಭಾಗಿನ ಅರ್ಪಿಸಿ ಶುಭಹಾರೈಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 10. ಮೇಕೆದಾಟು “ನೀರಿಗಾಗಿ ನಡಿಗೆ” ಪಾದಯಾತ್ರೆಗೆ ಸುಳ್ಯದ ಕಾಂಗ್ರೆಸ್ ಪ್ರಮುಖರಿಂದ ಸುಳ್ಯದ ಅರಂಬೂರು ಪಾಲಡ್ಕ ಪಯಸ್ವಿನಿ ನದಿಗೆ ದವಸ ಧಾನ್ಯಗಳನ್ನು ಭಾಗಿನ ಅರ್ಪಣೆ ಮಾಡಿ ರಾಜ್ಯದ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ನಡೆಯುತ್ತಿರುವ ಮೇಕೆದಾಟು ನೀರಿಗಾಗಿ ನಡಿಗೆ 10 ದಿನಗಳ ಬ್ರಹತ್ ಪಾದಯಾತ್ರೆಗೆ ಶುಭ ಹಾರೈಸಲಾಯಿತು.


ಅಲ್ಲದೇ ಸುಳ್ಯ ನಗರ ಪಂಚಾಯತ್ ನ ಹಲವಾರು ವರ್ಷಗಳ ಶುದ್ಧ ಕುಡಿಯುವ ನೀರಿನ ಯೋಜನೆಯು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು. ಈ ಕಾರ್ಯಕ್ರಮದಲ್ಲಿ ಸರ್ವ ಧರ್ಮದ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಜಯಪ್ರಕಾಶ್ ರೈ ಎನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿಸಿ ಜಯರಾಮ್, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂಶುದ್ದೀನ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ ಎಂ ಜೆ, ಇಂಟಕ್ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಶಾಫಿ ಕುತ್ತಮೊಟ್ಟೆ, ಮಹಮ್ಮದ್ ಕುಂಞಿ ಗೂನಡ್ಕ, ಬ್ಲಾಕ್ ಮಾಧ್ಯಮ ಸಂಯೋಜಕ ಭವಾನಿಶಂಕರ್ ಕಲ್ಮಡ್ಕ, ಸುರೇಶ್ ಎಂ ಹೆಚ್, ಧೀರಾ ಕ್ರಾಸ್ತ, ಜೂಲಿಯಾನ ಕ್ರಾಸ್ತಾ, ಬಾಪು ಸಾಹೇಬ್, ರಾಧಾಕೃಷ್ಣ ಪರಿವಾರಕಾನ, ಅನಿಲ್ ಬಳ್ಳಡ್ಕ, ಗಣೇಶ್ ಬೀರಮಂಗಲ, ರವಿಚಂದ್ರ ತೊಡಿಕಾನ, ಕೀರ್ತನ್ ಕೊಡಪಾಲ, ಶವಾದ್ ಗೂನಡ್ಕ, ರಾಬರ್ಟ್ ಡಿಸೋಜ, ರಾಜು ಪಂಡಿತ್, ಗಂಗಾಧರ್ ಮೇನಾಲ, ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಗೋಕುಲ್ ದಾಸ್ ಸಂಯೋಜಿಸಿದ್ದರು.

Also Read  ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಉಪನೋಂದಣಾ ಕಚೇರಿ ➤ ಆಕ್ಷೇಪಣೆಗೆ ಅವಕಾಶ

error: Content is protected !!
Scroll to Top