ಸುಳ್ಯ: ಮಸಾಲೆ ಪುಡಿ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯ ಕೈಗೆ ಗಂಭೀರ ಗಾಯ..!

(ನ್ಯೂಸ್ ಕಡಬ) newskadaba.com ಸುಳ್ಯ, ಜ. 06. ಇಂಡಸ್ಟ್ರಿ ಒಂದರಲ್ಲಿ ಮಸಾಲೆ ಪುಡಿಗೆ ಬಳಸುವ ಪದಾರ್ಥಗಳ ಡ್ರೈ ಮಾಡುವ ಮಿಷನ್ ಗೆ ಮಹಿಳೆಯೋರ್ವ ಕೈ ಸಿಲುಕಿ ಗಂಭೀರ ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.

ಗಾಯಗೊಂಡ ಮಹಿಳೆಯನ್ನು ಜಯನಗರ ನಿವಾಸಿ ಸಾವಿತ್ರಿ ಎಂದು ಗುರುತಿಸಲಾಗಿದೆ. ಇವರು ಜಯನಗರ ಇಂಡಸ್ಟ್ರೀಸ್ ನಲ್ಲಿ ಕೆಲಸ ಮಾಡುತ್ತಿದ್ದು, ಮಸಾಲೆ ಪದಾರ್ಥಕ್ಕೆ ಬಳಸುವ ಸಾಮಗ್ರಿಗಳನ್ನು ಡ್ರೈ ಮಾಡುವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕೈ ಸಿಲುಕಿ ಈ ಘಟನೆ ಸಂಭವಿಸಿದೆ. ತಕ್ಷಣವೇ ಸಹಸಿಬ್ಬಂದಿಗಳು ಸೇರಿ ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

Also Read  ಪರಣೆ: ಸೋಲಾರ್ ದೀಪ ಉದ್ಘಾಟನೆ

error: Content is protected !!
Scroll to Top