ವಾರಾಂತ್ಯ ಕರ್ಫ್ಯೂ- ಪ್ರಯಾಣಕ್ಕೆ ಬೇಕು ನೆಗೆಟಿವ್ ರಿಪೋರ್ಟ್..! ➤ ಕೆಎಸ್ಸಾರ್ಟಿಸಿ ಯಿಂದ ಖಡಕ್ ರೂಲ್ಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 06. ರಾಜ್ಯದಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಪ್ರಕರಣಗಳು ದಿನವೊಂದಕ್ಕೆ 4 ಸಾವಿರ ಪ್ರಕರಣ ದಾಟಿದ್ದು, ಇದರ ನಡುವೆಯೇ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ನೈಟ್ ಕರ್ಪ್ಯೂ ಹಾಗೂ ವಿಕೇಂಡ್ ಕರ್ಪ್ಯೂ ಜಾರಿಗೆ ತಂದಿದೆ. ಅದರಂತೆಯೇ ಕೆ.ಎಸ್.ಆರ್.ಟಿಸಿ ಕೂಡಾ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ವಾರಾಂತ್ಯದಂದು ಜನದಟ್ಟಣೆಯನ್ನು ನೋಡಿಕೊಂಡು ಸಾರಿಗೆ ಸೇವೆಯನ್ನು ಒದಗಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದ್ದು, ಸಾಧ್ಯವಾದಷ್ಟು ಆನ್ ಲೈನ್ ಬುಕ್ಕಿಂಗ್ ಗೆ ಆದ್ಯತೆ ನೀಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

ಕೆಎಸ್ಆರ್ಟಿಸಿ ಕೈಗೊಂಡಿರುವ ನಿಯಮಗಳು:-

1. ವಾರಾಂತ್ಯದಲ್ಲಿ ಜನಸಂಚಾರವನ್ನು ನೋಡಿಕೊಂಡು ಅಗತ್ಯವಿದ್ದಷ್ಟೇ ಬಸ್ ಸೇವೆ ಒದಗಿಸುವುದು.

Also Read  ನಾಳೆ ಸಂವಿಧಾನ ದಿನಾಚರಣೆ, ಎಲ್ಲ ಶಾಲಾ-ಕಾಲೇಜು, ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯ

2.ರಾತ್ರಿಯ ವೇಳೆ ಬಸ್ ಸೇವೆಗಳಿಗೆ ಆನ್ ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸಿ, ಬುಕ್ಕಿಂಗ್ ಆಧರಿಸಿ ಬಸ್ ಸೌಲಭ್ಯ ಒದಗಿಸುವುದು.

3. ನೆರೆ ರಾಜ್ಯಗಳಿಂದ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಎರಡು ಡೋಸ್ ಪಡೆದರೂ, ಪಡೆಯದಿದ್ದರೂ 72 ಗಂಟೆ ಮುಂಚಿತ ಆರ್ ಟಿ ಪಿಎಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ.

4. ಮಹಾರಾಷ್ಟ್ರ, ಗೋವಾ, ಕೇರಳದಿಂದ ಬರುವ ಪ್ರಯಾಣಿಕರು ಆರ್ ಟಿ ಪಿ ಸಿ ಆರ್ ಟೆಸ್ಟ್ ವರದಿ ತೋರಿಸುವುದು ಕಡ್ಡಾಯಗೊಳಿಸಲಾಗಿದೆ.

5. ಕೆಎಸ್ಆರ್ಟಿಸಿ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯ ಅಲ್ಲದೇ ಪ್ರಯಾಣಿಕರಿಗೆ ಕೊವಿಡ್ ಮಾರ್ಗಸೂಚಿಯ ಅಗತ್ಯವನ್ನು ಮನವರಿಕೆ ಮಾಡಿಸುವಂತೆ ಸೂಚಿಸಲಾಗಿದೆ.

 

 

 

Also Read  ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

error: Content is protected !!
Scroll to Top