ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ ಅವರಿಗೆ ಪದೋನ್ನತಿ

(ನ್ಯೂಸ್ ಕಡಬ) newskadaba.com ಕಡಬ, ಜ. 05. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಡಬ ಘಟಕದ ಪ್ರಭಾರ ಘಟಕಾಧಿಕಾರಿಯಾದ (ಸಾರ್ಜೆಂಟ್) ತೀರ್ಥೇಶ್ ಅಮೈ, ಮೆಟಲ್ ನಂ 489, ಇವರು ಪ್ರಭಾರ ಘಟಕಾಧಿಕಾರಿಯಾಗಿದ್ದು, ಗೃಹರಕ್ಷಕದಳದಲ್ಲಿ1997 ರಲ್ಲಿ ಸೇವೆಗೆ ಸೇರಿದ್ದು, ಸುಮಾರು 24 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೇಂದ್ರ ಕಛೇರಿಯಿಂದ ಲೀಡರ್ ಶಿಪ್ ತರಬೇತಿ, ರೈಫಲ್, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ತರಬೇತಿ ಹಾಗೂ ಮಂಗಳೂರಿನಲ್ಲಿ ನಡೆದ ಪ್ರಥಮ ಚಿಕಿತ್ಸೆ ತರಬೇತಿ, ಮೂಲ ಅಗ್ನಿ ಶಮನ ತರಬೇತಿ, ಪ್ರವಾಹ ರಕ್ಷಣಾ ತರಬೇತಿಗಳನ್ನು ಪಡೆದಿರುತ್ತಾರೆ. ಇವರು ಅಗ್ನಿಶಾಮಕ ಕರ್ತವ್ಯ, ಪ್ರವಾಹ ರಕ್ಷಣಾ ಕರ್ತವ್ಯ, ರೈಲ್ವೆ ಕರ್ತವ್ಯ, ಪೊಲೀಸ್ ಠಾಣಾ ಕರ್ತವ್ಯ, ಚುನಾವಣಾ ಕರ್ತವ್ಯ, ಬಂದೋಬಸ್ತ್ ಕರ್ತವ್ಯ ಹಾಗೂ ಕೋವಿಡ್ ಕರ್ತವ್ಯಗಳಲ್ಲಿ ಪೂರ್ಣಪ್ರಮಾಣ ತೊಡಗಿಸಿಕೊಂಡಿರುತ್ತಾರೆ.

Also Read  ಸ್ಕೂಟಿ ಮತ್ತು ಬೈಕ್ ಢಿಕ್ಕಿ ➤ ಸ್ಕೂಟಿ ಸವಾರ ಸಾವು

ಇವರ ಸೇವಾ ಹಿರಿತನ ಮತ್ತು ದಕ್ಷತೆಯನ್ನು ಆಧರಿಸಿ ಇವರಿಗೆ ಪದೋನ್ನತಿ ನೀಡಲು ಮಾನ್ಯ ಡಿಜಿಪಿ ಅವರು ಶಿಫಾರಸ್ಸು ಮಾಡಿರುತ್ತಾರೆ. ಇದೀಗ ಮಾನ್ಯ ಡಿಜಿಪಿ ಅವರ ಆದೇಶ ಮತ್ತು ಅನುಮತಿಯೊಂದಿಗೆ ತೀರ್ಥೇಶ್ ಅವರಿಗೆ ಪೂರ್ಣ ಪ್ರಮಾಣದ ಪದೋನ್ನತಿ ಸಲ್ಲಿಸಲಾಗಿದೆ. ಇವರ ಈ ಸೇವೆಗೆ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರ ಶಿಫಾರಸ್ಸಿನ ಮೇರೆಗೆ ಕೇಂದ್ರ ಕಛೇರಿಯಿಂದ ದೊರೆತ ಪೂರ್ಣ ಪ್ರಮಾಣದ ಘಟಕಾಧಿಕಾರಿ (ಫ್ಲಟೂನ್ ಕಮಾಂಡರ್) ಹುದ್ದೆಯ ಪದೋನ್ನತಿ ಪ್ರಮಾಣ ಪತ್ರವನ್ನು ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಛೇರಿಯ ಪ್ರಥಮ ದರ್ಜಿ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ಕಡಬ ಘಟಕದ ಗೃಹರಕ್ಷಕರಾದ ರವಿ, ಉಮೇಶ್, ಪವಿತ್ ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ಸುಲೋಚನ, ಜಯಲಕ್ಷ್ಮಿ, ಮಹೇಶ್ ಪ್ರಸಾದ್ ಹಾಗೂ ದುಷ್ಯಂತ್ ರೈ ಉಪಸ್ಥಿತರಿದ್ದರು.

Also Read  ಸಂಶೋಧಕ ರಾಘವೇಂದ್ರ ಅವರಿಗೆ ಪಿಎಚ್ ಡಿ ಪ್ರದಾನ

 

 

error: Content is protected !!
Scroll to Top