(ನ್ಯೂಸ್ ಕಡಬ) newskadaba.com ಕಡಬ, ಜ. 05. ಕಡಬ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ಮೆಂಟ್ ಇದರ ಜಂಟಿ ಆಶ್ರಯದಲ್ಲಿ ಮುಸಾಬಖ-2k21 ರೇಂಜ್ ಮಟ್ಟದ ವಿದ್ಯಾರ್ಥಿ ಕಲಾ ಸಾಹಿತ್ಯ ಸ್ಪರ್ಧೆಯು ನೆಕ್ಕರೆ ಮಸ್ಜಿದುಲ್ ಬಾರೀ ಜುಮಾ ಮಸ್ಜಿದ್ ಸಭಾಂಗಣದಲ್ಲಿ ಡಿಸೆಂಬರ್ 25ರಂದು ನಡೆಯಿತು. 12 ಮದ್ರಸಗಳ 175 ವಿದ್ಯಾರ್ಥಿಗಳಿಂದ ಮೂರು ವೇದಿಕೆಗಳಲ್ಲಿ 6 ಡಿವಿಷನುಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಮುಈನುಲ್ ಇಸ್ಲಾಂ ಮದ್ರಸ ಕಡಬ ಚಾಂಪಿಯನ್ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಸುಂಕದಕಟ್ಟೆ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ನೆಕ್ಕರೆ ನೂರುಲ್ ಹುದಾ ಮದ್ರಸ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡ ಸಭೆಯಲ್ಲಿ ನೆಕ್ಕರೆ BJM ಅಧ್ಯಕ್ಷರಾದ ಅಬ್ದುಲ್ ಖಾದರ್ ದ್ವಜಾರೋಹಣ ನಿರ್ವಹಿಸಿದರು. ರೇಂಜ್ ಅಧ್ಯಕ್ಷರಾದ ಅಲ್ ಹಾಜ್ PM ಇಬ್ರಾಹಿಂ ದಾರಿಮಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಸ್ಥಳೀಯ ಖತೀಬರಾದ ಖಾಲಿದ್ ಫೈಝಿ ದುಆ ಹಾಗೂ ಉದ್ಘಾಟನೆಯನ್ನು ನಿರ್ವಹಿಸಿದರು. ಬಳಿಕ ಮದ್ರಸ ಮಕ್ಕಳ ಕಾರ್ಯಕ್ರಮ ನಡೆಯಿತು. ಲುಹ್ರ್ ನಮಾಝಿನ ಬಳಿಕ ಪ್ರಮುಖ ಪಂಡಿತರು ಕುಂತೂರು ಮುದರ್ರಿಸರೂ ಆದ ಬಹು ಮೊಯ್ದು ಫೈಝಿ ಕೊಡಗು ಇವರ ನೇತೃತ್ವದಲ್ಲಿ ತಹ್ಲೀಲ್ ಸಮರ್ಪಣೆ ಹಾಗು ದುಆ ಮಜ್ಲಿಸ್ ನಡೆಯಿತು. ಸಂಜೆ ನಡೆದ ಸಮಾರೋಪ ಹಾಗೂ ಅನುಸ್ಮರಣಾ ಸಮಾರಂಭದ ಅಧ್ಯಕ್ಷತೆಯನ್ನು ಕಡಬ ರೇಂಜ್ ಮದ್ರಸಾ ಮೇನೇಜ್ಮೆಂಟ್ ಅಧ್ಯಕ್ಷರಾದ SA ಅಬ್ದುಲ್ ಖಾದರ್ ಹಾಜಿ ಸುಂಕದಕಟ್ಟೆ ಇವರು ವಹಿಸಿದ್ದರು. PM ಇಬ್ರಾಹಿಂ ದಾರಿಮಿ ಉದ್ಘಾಟನೆಗೈದು ಅಸ್ಸಯ್ಯದ್ ಜುನೈದ್ ಜಿಫ್ರೀ ತಙ್ಙಳ್ ದುಆ ಹಾಗೂ ಅನುಸ್ಮರಣಾ ಪ್ರಭಾಷಣ ನಡೆಸಿದರು. ನೆಕ್ಕರೆ ಜಮಾಅತಿನ ಸಂಪೂರ್ಣ ಸಹಕಾರದೊಂದಿಗೆ ನಡೆದ ಸಭೆಯಲ್ಲಿ SKIMVB ಮುಫತ್ತಿಷರಾದ ರಶೀದ್ ಮುಸ್ಲಿಯಾರ್, ಉಮರ್ ದಾರಿಮಿ ಸಾಲ್ಮರ, ವಿದ್ಯಾಭ್ಯಾಸ ಮಂಡಳಿ ಸದಸ್ಯರಾದ ಹಾಜಿ ಶರೀಫ್ ಫೈಝಿ, ಪನ್ಯ ಮದ್ರಸ ಮೇನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮರುವಂತಿಲ, ರೇಂಜ್ ಕೋಶಾಧಿಕಾರಿ K ಅಬ್ದುಲ್ ಖಾದರ್ ಹಾಜಿ ಕಡಬ, ಮುಹಮ್ಮದ್ ಮುಸ್ಲಿಯಾರ್ ಕಡಬ, SKSSF ವಲಯಾಧ್ಯಕ್ಷರಾದ ಅಶ್ರಫ್ ಶೇಡಿಗುಂಡಿ ಸೇರಿದಂತೆ ರೇಂಜ್ ಗೊಳಪ್ಪಟ್ಟ ಮಸೀದಿಗಳ ಖತೀಬರು ಸದರ್ ಉಸ್ತಾದರುಗಳು ಮೆನೇಜ್ಮೆಂಟ್ ಪಧಾದಿಕಾರಿಗಳು ಜಂಇಯ್ಯತುಲ್ ಮುಅಲ್ಲಿಮೀನ್ ಪಧಾದಿಕಾರಿಗಳು ನೆಕ್ಕರೆ ಜಮಾಅತಿನ ನೇತಾರರು SKSSF ನ ಕಾರ್ಯಕರ್ತರು ಕಂಝುಲ್ ಫಲಾಹ್ ಎಂಗ್ ಮೆನ್ಸಿನ ಕಾರ್ಯಕರ್ತರು ಹಾಜರಿದ್ದು ಎಲ್ಲಾ ರೀತಿಯ ಸಹಾಯ ಸಹಕಾರವನ್ನು ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ರೇಂಜ್ ಪ್ರಧಾನ ಕಾರ್ಯದರ್ಶಿ AM ಶರೀಫ್ ಹನೀಫಿ ಸ್ವಾಗತಿಸಿ ಸಮಾರೋಪ ಸಮಾರಂಭದಲ್ಲಿ ಮುಸಾಬಖ ಸ್ವಾಗತ ಸಮಿತಿ ಚಯರ್ಮೇನ್ ಶುಕೂರ್ ದಾರಿಮಿ ಕುಂತೂರು ಸ್ವಾಗತವಿತ್ತರು. ಮದ್ರಸ ರೇಂಜ್ ಜೊತೆ ಕಾರ್ಯದರ್ಶಿ ಎ ಪಿ ಎ ಆತೂರು ಕಾರ್ಯಕ್ರಮ ನಡೆಸಿ ಕೊಟ್ಟು ಮೇನೇಜ್ಮೆಂಟ್ ಜೊತೆ ಕಾರ್ಯದರ್ಶಿ PM ಮೊಯ್ದೀನ್ ಪೊರಂತ್ ರವರ ಧನ್ಯವಾದದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.