ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿಲೇವಾರಿಯಾಗದ ಅಕ್ರಮ-ಸಕ್ರಮ ಕಡತ ➤ ಹೋರಾಟ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜ. 04. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಕಡತಗಳು ವಿಲೇವಾರಿ ಆಗದ ಹಿನ್ನೆಲೆ ರೈತರು, ಕೃಷಿ ಕೂಲಿ ಕಾರ್ಮಿಕರು, ದಲಿತ ಸಮುದಾಯ, ಅಲ್ಪ ಸಂಖ್ಯಾತರ ಅಕ್ರಮ ಸಕ್ರಮ ಹೋರಾಟ ಸಮಿತಿಯ ಸಭೆ ಕಡಬ ಗೌಡ ಸುಮುದಾಯ ಭವನದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿ ಸಂಚಾಲಕ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಕಡಬ ಪಟ್ಟಣ ಪಂಚಾಯತ್ ಆಗಿ ಒಂದೂವರೆ ವರ್ಷ ಕಳೆದಿದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಕಡಬ, ಕೋಡಿಂಬಾಳ, ಕುಟ್ರುಪ್ಪಾಡಿ, ಬಂಟ್ರ, ನೆಕ್ಕಿಲಾಡಿ, ಕೇನ್ಯ, ಎಡಮಂಗಲ ಗ್ರಾಮಗಳ ಒಟ್ಟು 4865 ಕ್ಕೂ ಮೇಲ್ಪಟ್ಟ ಜನರು ಈ ಹಿಂದೆ ನೀಡಿದ ಅಕ್ರಮ ಸಕ್ರಮ ಅರ್ಜಿಯ ಕಡತಗಳು ವಿಲೇವಾರಿಯಾಗದೇ ಇರುವುದರಿಂದ ಅನ್ಯಾಯವಾಗಿದೆ. ಕಾನೂನು ಸಡಿಲಿಕೆ ಮಾಡಿ ಈಗಾಗಲೇ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಂಜೂರಾತಿ ನೀಡಬೇಕೆಂದು ಹೋರಾಟ ನಡೆಸಿ ಮನವಿ ಸಲ್ಲಿಸಿದರೂ ಯವುದೇ ಪ್ರಯೋಜನವಾಗಿಲ್ಲ. ಇನ್ನು ಮುಂದೆ ಉಗ್ರ ಹೋರಾಟವೊಂದೇ ಉಳಿದಿರುವ ದಾರಿ ಹಾಗಾಗಿ ನಾವು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡುವುದೆಂದು ನಿರ್ಧರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಚಂದ್ರಶೇಖರ ಗೌಡ ಕೋಡಿಬೈಲು, ಶಿವರಾಮ ಗೌಡ ಕಲ್ಕಲ, ಜನಾರ್ಧನ ಗೌಡ ಪಣೆಮಜಲು, ಚಾಕೋ ಕೆ.ವಿ, ಅನ್ನಕುಟ್ಟಿ, ಕುರಿಯಕೋಸ್, ರಿಜೋ, ಅಬೂಬಕರ್, ರತ್ನಾ, ಗೀತಾ, ಭವಾನಿ ಮತ್ತಿತರರು ಉಪಸ್ಥಿತರಿದ್ದರು.

 

error: Content is protected !!

Join the Group

Join WhatsApp Group