ರಾಯಲ್ ಫ್ರೆಂಡ್ಸ್ ಗೂನಡ್ಕ ವತಿಯಿಂದ ಜಿಎಸ್ ಎಲ್ 2022 ಸೀಸನ್-5 ಫುಟ್ಬಾಲ್ ಪಂದ್ಯಾಟ ➤ ಪ್ರಥಮ ಸ್ಥಾನ ಪಡೆದ ಯುನೈಟೆಡ್ ಅರಂಬೂರು

(ನ್ಯೂಸ್ ಕಡಬ) newskadaba.com ಸಂಪಾಜೆ, ಜ. 04. ಗೂನಡ್ಕ ರೋಯಲ್ ಫ್ರೆಂಡ್ಸ್ ವತಿಯಿಂದ ತೆಕ್ಕಿಲ್ ಶಾಲಾ ಮೈದಾನದಲ್ಲಿ ನಡೆದ ಪುಟ್ಬಾಲ್ ಪಂದ್ಯಾಟವನ್ನು ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಉದ್ಘಾಟಿಸಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ ಹಮೀದ್ ಗೂನಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಅಬುಸಾಲಿ ಗೂನಡ್ಕ, ಬೀಜದಕಟ್ಟೆ ಇಂಡಸ್ಟ್ರೀಸ್ ಮಾಲಕರಾದ ರಹೀಂ ಬೀಜದಕಟ್ಟೆ, ಕೆಪಿಸಿಸಿ ಸಾಮಾಜಿಕ ಜಾಲತಾಣ ಪ್ರಧಾನ ಕಾರ್ಯದರ್ಶಿ ರಿಯಾಝ್ ಕಲ್ಲುಗುಂಡಿ, ಎನ್ಎಸ್.ಯುಐ ಸುಳ್ಯ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಉಬೈಸ್ ಗೂನಡ್ಕ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಯುವ ಉದ್ಯಮಿಗಳಾದ ಅಯ್ಯೂಬ್ ಗೂನಡ್ಕ, ಶವಾದ್ ಕತ್ತಾರ್ ಹಾಗೂ ಸಂಪಾಜೆ ಗ್ರಾಮದ ಉತ್ತಮ ಬೈಕ್ ರೈಡರ್ ಆದ ಯೂಸುಫ್ ಕಲ್ಲುಗುಂಡಿ ಮೊದಲಾದವರು ಭಾಗವಹಿಸಿದ್ದರು. ಪಂದ್ಯಕೂಟದ ಸಮರೋಪ ಸಮಾರಂಭದಲ್ಲಿ ಗೂನಡ್ಕ ರೋಯಲ್ ಫ್ರೆಂಡ್ಸ್ ಅಧ್ಯಕ್ಷರಾದ ಸಾಜಿದ್ ಐ.ಜಿ.ವಹಿಸಿದರು. ಪ್ರಥಮ ಸ್ಥಾನ ಪಡೆದ ಯುನೈಟೆಡ್‌ ಅರಂಬೂರು ಹಾಗೂ ದ್ವಿತೀಯ ಸ್ಥಾನ ಪಡೆದ ರೋಯಲ್ ಫ್ರೆಂಡ್ಸ್ ತಂಡಗಳಿಗೆ ಬಹುಮಾನವನ್ನು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸಾಮಾಜಿಕ ಜಾಲತಾಣ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಹೊಸೂರು, ಜೆಡಿಎಸ್ ಯುವ ಮುಖಂಡ ಹನೀಫ್ ಮೊಟ್ಟಂಗಾರ್ ಮುಂತಾದವರು ಉಪಸ್ಥಿತರಿದ್ದರು. ಫೈನಲ್ ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿಯನ್ನು ಅಶ್ರೀದ್ ಗುಂಡಿ, ಉತ್ತಮ ಆಟಗಾರ ಜಾಶೀರ್, ಡಿಫೇಂಡರ್ ಅದ್ನಾನ್, ಬೆಸ್ಟ್ ಗೋಲ್ ಕೀಪರ್ ಅಸ್ಗರ್, ಬೆಸ್ಟ್ ಫಾರ್ವರ್ಡ್‌ ಮುಬಶೀರ್ ಪಡೆದರು. ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಫ್ವಾನ್ ಹಾಗೂ ಮೌಶೂಕ್ ರವರನ್ನು ಸನ್ಮಾನಿಸಲಾಯಿತು . ಸಂಘಟಕರಾದ ಜಾಬೀರ್, ನೌಶಾದ್, ಮುಬಶೀರ್ ಪಂದ್ಯಕೂಟದಲ್ಲಿ ಸಹಕರಿಸಿದರು. ಇಜಾಸ್ ಗೂನಡ್ಕ ಸ್ವಾಗತಿಸಿ ವಂದಿಸಿದರು. ಫಾರೂಖ್ ಕಾನಕ್ಕೋಡ್ ಕಾರ್ಯಕ್ರಮ ನಿರೂಪಿಸಿದರು .

Also Read  ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ► ಪ್ರಳಯ‌ ಬಾಧಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಸ್ತಾಂತರ

error: Content is protected !!
Scroll to Top