ಎಸ್ಕೆಎಸ್ಸೆಸ್ಸೆಫ್ ಸುಳ್ಯ ಟೌನ್ ನೂತನ ಸಮಿತಿ‌ ರಚನೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 04. ಎಸ್ಕೆಎಸ್ಸೆಸ್ಸೆಫ್ ಸುಳ್ಯ ಟೌನ್ ಸಮಿತಿಯ ಮಹಾಸಭೆಯು ಸುಳ್ಯ ದ ಸುನ್ನೀ ಮಹಲ್ ಕಚೇರಿಯಲ್ಲಿ ನಡೆಯಿತು.

ಸಮಿತಿ ಗೌರವಾಧ್ಯಕ್ಷ ಇಕ್ಬಾಲ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಉಸ್ತಾದ್ ಝಕರಿಯಾ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರ.ಕಾರ್ಯದರ್ಶಿ ಅಕ್ಬರ್ ಕರಾವಳಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಚುನಾವಣಾ ವೀಕ್ಷಕರಾಗಿ ಅಬ್ದುಲ್ಲ ಫೈಝಿ ಪೈಂಬಚ್ಚಾಲ್ ಹಾಗೂ ಬಶೀರ್ ಯು.ಪಿ ಆಗಮಿಸಿದರು. ನಂತರ 2022-24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಹೀದ್ ಪಾರೆ, ಪ್ರ.ಕಾರ್ಯದರ್ಶಿ ನವಾಜ್ ಸುಪ್ರೀಂ, ಕೋಶಾಧಿಕಾರಿ ನಿಝಾರ್ ಅಹ್ಮದ್, ಉಪಾಧ್ಯಕ್ಷ ಅಬ್ದುಲ್ ಕಯ್ಯೂಮ್, ಜೊತೆ ಕಾರ್ಯದರ್ಶಿ ನಿಝಾರ್ ಅಂಜಿಕಾರ್, ಇಬಾದ್ ಕಾರ್ಯದರ್ಶಿ ಝಕರಿಯ ಫೈಝಿ, ವಿಖಾಯ ಕಲಂದರ್ ಎಲಿಮಲೆ, ಸಹಚಾರಿ ಮಶೂದ್ ಕೆ.ಎ, ಟ್ರೆಂಡ್ ಮುಹಮ್ಮದ್ ಜಿಫ್ರಿ, ಸರ್ಗಲಾಯ ಅಬ್ದುಲ್ ರವೂಫ್, ತ್ವಲಬಾ ಮಿದ್ಲಾಜ್ ದುಗಲಡ್ಕ, ಕ್ಯಾಂಪಸ್ ವಿಂಗ್ ನಾಸಿರುದ್ದೀನ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಕ್ಬಾಲ್ ಸುಳ್ಯ, ಅಶ್ರಫ್ ಕಲ್ಲುಮುಟ್ಲು, ಮುಹಮ್ಮದ್ ಆನ್ಶಿಫ್, ಅಹ್ಮದ್ ಶಾಮಿಲ್, ಅರ್ಮಾನ್ ಅವರನ್ನು ಆರಿಸಲಾಯಿತು. ಕ್ಲಸ್ಟರ್ ಕೌನ್ಸಿಲ್ ರಾಗಿ ಅಕ್ಬರ್ ಕರಾವಳಿ, ಆಶಿಕ್ ಸುಳ್ಯ, ಅಬ್ದುಲ್ ರಜಾಕ್ ಕರಾವಳಿ, ಕಲಂದರ್ ಎಲಿಮಲೆ ಯವರನ್ನು ಆಯ್ಕೆ ಮಾಡಲಾಯಿತು. ಅಕ್ಬರ್ ಸ್ವಾಗತಿಸಿ, ನವಾಜ್ ಸುಪ್ರೀಂ ವಂದಿಸಿದರು.

Also Read  ದೇವಸ್ಥಾನದ ಮೆಟ್ಟಿಲು ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು► ಯುವಕನೋರ್ವ ಮೃತ್ಯು

error: Content is protected !!
Scroll to Top