ಸುಳ್ಯ: ಚಿಲ್ಲರೆ ಹಣ ನೀಡಲು ತಡಮಾಡಿದ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್..! ➤ ಪ್ರಯಾಣಿಕನಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 04. ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ ಚಿಲ್ಲರೆ ಕೊಡಲು ವಿಳಂಬ ಮಾಡಿದ ಕಾರಣಕ್ಕೆ ಸಿಟ್ಟಿಗೆದ್ದ ಪ್ರಯಾಣಿಕನೋರ್ವ ಕಂಡಕ್ಟರ್ ಮೇಲೆಯೇ ಹಲ್ಲೆ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.


ಸುಳ್ಯದಿಂದ ಬೆಳ್ಳಾರೆ ಕಡೆಗೆ ತೆರಳುತ್ತಿದ್ದ ಬಸ್ ಗೆ ಐವರ್ನಾಡು ಎಂಬಲ್ಲಿ ಪುರುಷೋತ್ತಮ ಎಂಬವರು ಹತ್ತಿ, ಟಿಕೆಟ್ ಶುಲ್ಕವಾಗಿ ನೂರು ರೂಪಾಯಿಯನ್ನು ಕಂಡಕ್ಟರ್ ಗೆ ನೀಡಿದ್ದರು. ಬಳಿಕ ಟಿಕೆಟ್ ಹಿಂದೆ 90 ರೂ. ಎಂದು ಬರೆದು ನಂತರ ಹಿಂತಿರುಗಿಸುವುದಾಗಿ ತಿಳಿಸಿದ್ದರು. ಬಸ್ ಬೆಳ್ಳಾರೆ ತಲುಪಿದಾಗ ಕಂಡಕ್ಟರ್ ಬಳಿ ಪುರುಷೋತ್ತಮ್ ಅವರು ಉಳಿದ ಹಣ ಕೇಳಿದಾಗ ಪಕ್ಕದ ಅಂಗಡಿಗೆ ಚಿಲ್ಲರೆ ತರಲು ಇಳಿದು ಹೋಗಿ ಬರುವಾಗ ತಡವಾಗಿದ್ದು, ಈ ಕಾರಣದಿಂದ ಇವರು ಪುತ್ತೂರು ತೆರಳಬೇಕಿದ್ದ ಬಸ್ ತಪ್ಪಿ ಹೋಗಿತ್ತು. ಇದರಿಂದ ಕೋಪಗೊಂಡ ಪುರುಷೋತ್ತಮ ಅವರು ಕಂಡಕ್ಟರ್ ಜೊತೆಗೆ ಮಾತಿನ ಚಕಮಕಿ ನಡೆಸಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಕಂಡಕ್ಟರ್ ಅವರು ಪುರುಷೋತ್ತಮ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

 

error: Content is protected !!
Scroll to Top