(ನ್ಯೂಸ್ ಕಡಬ) newskadaba.com ನವದೆಹಲಿ, ಜ.01. ಹೊಸ ವರ್ಷದ ಸಂಭ್ರಮದಲ್ಲಿರುವ ಜನಸಾಮಾನ್ಯರ ದೈನಂದಿನ ಜೀವನ ಇಂದಿನಿಂದ ಮತ್ತಷ್ಟು ದುಬಾರಿಯಾಗಲಿದೆ.
ಕಚ್ಚಾವಸ್ತುಗಳ ಬೆಲೆ, ತೆರಿಗೆ ಹೆಚ್ಚಳ ಸೇರಿದಂತೆ ದಿನನಿತ್ಯ ಬಳಕೆಯ ಚಾ ಹುಡಿ, ಕಾಫಿ ಹುಡಿ, ಸೋಪ್ ಸೇರಿದಂತೆ ಕೆಲವು ವಸ್ತುಗಳ ದರದಲ್ಲಿ ಶೇ.10ರಷ್ಟು ಹೆಚ್ಚಳವಾಗಲಿದೆ. ಪಾದರಕ್ಷೆಗೆ ಇನ್ಮುಂದೆ 12% ಜಿಎಸ್ಟಿ ವಿಧಿಸಲಾಗುವುದರಿಂದ ಪಾದರಕ್ಷೆ ಬೆಲೆ ಏರಿಕೆಯಾಗಲಿದೆ. ಎಸಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿದಂತೆ ಇಲೆಕ್ಟ್ರಾನಿಕ್ ವಸ್ತುಗಳ ಬೆಲೆ ಶೆ.4 ರಿಂದ 10ರಷ್ಟು ಹೆಚ್ಚಳವಾಗಲಿದ್ದು, ಕಾರು, ದ್ವಿಚಕ್ರ ವಾಹನಗಳ ಬೆಲೆ 5% ರಷ್ಟು ಏರಿಕೆಯಾಗಲಿದೆ. ಇನ್ನು ಆನ್‌ಲೈನ್ ಸೇವೆಗಳಾದ ಓಲಾ, ಉಬರ್, ರ್ಯಾಪಿಡೋ ಸೇವೆಗಳು, ಸ್ವಿಗ್ಗಿ, ಝೊಮ್ಯಾಟೋ ಫುಡ್ ಡೆಲಿವರಿ ಮೇಲೆ 5% ಜಿಎಸ್ಟಿ ವಿಧಿಸಲಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.