ಆನ್ ಲೈನ್ ಆಟಕ್ಕೆ ತೊಡಗಿಸಲು ಮನೆಗೆ ನುಗ್ಗಿ 1.50 ಲಕ್ಷ ರೂ. ನಗದು ಕಳವುಗೈದ ವಿದ್ಯಾರ್ಥಿ..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 28. ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ ಘಟನೆ ಪನ್ನಿಪ್ಪಾರೆ ಎಂಬಲ್ಲಿ ವರದಿಯಾಗಿದೆ.


ಬಂಧಿತ ಆರೋಪಿಯನ್ನು ಮುಹಮ್ಮದ್ ಅನಸ್(18) ಎಂದು ಗುರುತಿಸಲಾಗಿದೆ. ಈತ ಪನ್ನಿಪ್ಪಾರೆಯ ಅಬ್ದುಲ್ ರಹ್ಮಾನ್ ಅವರ ಪತ್ನಿ ಮಜ್ಮಾ ಅವರು ಮದುವೆ ಕಾರ್ಯಕ್ರಮಕ್ಕೆಂದು ಹೋಗಿದ್ದ ಸಂದರ್ಭ ಮನೆಯ ಒಳನುಗ್ಗಿ ಮನೆಯಲ್ಲಿದ್ದ ಒಂದೂವರೆ ಲಕ್ಷ ರೂ. ಕಳವು ಮಾಡಿದ್ದ. ಇದಕ್ಕೆ ಸಂಬಂಧಿಸಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಅನಸ್ ನನ್ನು ಬಂಧಿಸಿ ವಿಚಾರಣೆ ಮಾಡಿದ್ದು, ಈ ವೇಳೆ ಆನ್ ಲೈನ್ ಆಟಕ್ಕೆ ತೊಡಗಿಸಲು ಹಣ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.

Also Read  ಬಸ್ಸಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ➤ ಆರೋಪಿ ಅಂದರ್

 

 

 

error: Content is protected !!
Scroll to Top