ಮಂಗಳನಗರಿಯಲ್ಲಿ ರಂಗು ತುಂಬಿದ ಕಡಬ ಗ್ರಾಮೀಣ ಮಹಿಳೆಯರ ಹೂಗುಚ್ಛ ➤ ಜಿಲ್ಲಾ ಪತ್ರಕರ್ತರ ಸಂಘದ ಸಮ್ಮೇಳನಕ್ಕೆ ಹೂಗುಚ್ಛ ಕಟ್ಟಿಕೊಟ್ಟ ಕಡಬ ಧ.ಗ್ರಾ.ಯೋಜನೆಯ ಮಹಿಳೆಯರು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.28. ಗ್ರಾಮೀಣ ಮಹಿಳೆಯರ ಪ್ರತಿಭೆಯ ಹೋರಣ, ಅವರ ಕೈಚಳಕದಲ್ಲಿ ಮೂಡಿ ಬಂದ ಹೂ ಗುಚ್ಚಗಳು ಇಂದು ಮಂಗಳೂರಿನಲ್ಲಿ ಗಣ್ಯರನ್ನು ಗೌರವಿಸಿದೆ!

ಹೌದು ಇಂದು ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿರುವ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮ್ಮೇಳನ ದಲ್ಲಿ ದ.ಗ್ರಾ.ಯೋ. ಕಡಬ ವಲಯದ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರಿಂದ ತಯಾರಿಸಿ ನೀಡಲಾದ ಆಕರ್ಷಕ ಹೂ ಗುಚ್ಚಗಳು ಗಮನ ಸೆಳೆಯಿತು. ಕಾರ್ಯಕ್ರಮ ಕ್ಕೆ ಇಲ್ಲಿನ ಸದಸ್ಯರು ಸುಮಾರು ನೂರಕ್ಕಿಂತಲೂ ಹೆಚ್ಚು ಹೂ ಗುಚ್ಚಗಳನ್ನು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಕಡಬ ಪಿಜಕಳ ದಲ್ಲಿ ನಡೆದ ಹಾಜಬ್ಬನವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಕಾರ್ಯನಿರತ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆಯವರಿಗೆ ಕಾರ್ಯಕ್ರಮದಲ್ಲಿ ನೀಡಲಾದ ಹೂ ಗುಚ್ವಗಳನ್ನು ನೋಡಿ ಖುಷಿಪಟ್ಟಿದ್ದರು. ಬಳಿಕ ಆ ಹೂ ಗುಚ್ಚಗಳನ್ನು ತಯಾರಿಸಿದ ಧ.ಗ್ರಾ.ಯೋ. ಸದಸ್ಯರಲ್ಲಿ ಮಾತನಾಡಿ ನಮ್ಮ ಕಾರ್ಯಕ್ರಮ ಕ್ಕೂ ತಯಾರಿಸಿ ಕೊಡುವಂತೆ ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಅವರು ಹೂ ಗುಚ್ಚಗಳನ್ನು ತಮ್ಮ ಸಂಘದ ಮಹಿಳಾ ಸದಸ್ಯ ರಲ್ಲಿ ತಯಾರಿಸಿ ಸಮ್ಮೇಳನ ಕ್ಕೆ ನೀಡಿದ್ದಾರೆ.

Also Read  "mostbet'teki Belge Numarasının Gizemini Çözmek: Bilmeniz Gereken Her Şe

 

 

error: Content is protected !!
Scroll to Top