ಮಂಗಳೂರು: ರಿವರ್ಸ್ ತೆಗೆಯುವ ಸಂದರ್ಭ ಆಂಬ್ಯುಲೆನ್ಸ್ ಪಲ್ಟಿ ➤ ಬೈಕ್ ಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 27. ವಾಹನವನ್ನು ಹಿಂತೆಗೆಯುವ ಸಂದರ್ಭ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ಎಂಟು ಅಡಿ ಎತ್ತರದಿಂದ ಉರುಳಿಬಿದ್ದ ಪರಿಣಾಮ ದ್ವಿಚಕ್ರ ವಾಹನಗಳು ಜಖಂ ಗೊಂಡ ಘಟನೆ ಫಳ್ನೀರ್ ನ ಖಾಸಗಿ ಆಸ್ಪತ್ರೆ ಬಳಿ ಸೋಮವಾರದಂದು ನಡೆದಿದೆ.


ಆಂಬ್ಯುಲೆನ್ಸ್ ನ್ನು ಹಿಂದಕ್ಕೆ ತೆಗೆಯುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಗೋಡೆಗೆ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

error: Content is protected !!
Scroll to Top