ಕಡಬ: ಚಿರತೆ ಮರಿಯನ್ನು ಹೋಲುವ ಪ್ರಾಣಿ ವಾಹನದಡಿಗೆ ಬಿದ್ದು ಸಾವು

(ನ್ಯೂಸ್ ಕಡಬ) newskadaba.com ಕಡಬ, ಡಿ.27. ಚಿರತೆ ಮರಿಯನ್ನು ಹೋಲುವ ಪ್ರಾಣಿಯೊಂದು ವಾಹನದ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೇಸ್ಟೇಷನ್ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಚಿರತೆಯನ್ನು ಹೋಲುವ ಈ ಪ್ರಾಣಿಯು ಅಪರಿಚಿತ ವಾಹನದ ಅಡಿಗೆ ಬಿದ್ದಿದ್ದು, ರಸ್ತೆಯಲ್ಲೇ ಸಾವನ್ನಪ್ಪಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಪಚ್ಚನಾಡಿ ತ್ಯಾಜ್ಯ ನೀರು ಸಂಸ್ಕರಣೆಗೆ ಶಾಶ್ವತ ಪರಿಹಾರ - ಕೋಟಾ ಶ್ರೀನಿವಾಸ ಪೂಜಾರಿ

 

 

error: Content is protected !!
Scroll to Top