ಮಂಗಳೂರು – ಬೆಂಗಳೂರು ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ➤ ಆರೋಪಿ ಸುಳ್ಯ ನಿವಾಸಿ ಬಂಧನ



(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26. ರೈಲಿನಲ್ಲಿ ರಾತ್ರಿ ನಿದ್ರಿಸುತ್ತಿದ್ದ ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ಕಳ್ಳತನಗೈಯ್ಯುತ್ತಿದ್ದ ಆರೋಪಿಯನ್ನು ಮಂಗಳೂರು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.







ಬಂಧಿತ ಆರೋಪಿಯನ್ನು ಸುಳ್ಯ ತಾಲೂಕಿನ ಕಲ್ಲುಮುಟ್ಲು ನಿವಾಸಿ ಅಬ್ದುಲ್ ಅಜೀಜ್(19) ಎಂದು ಗುರುತಿಸಲಾಗಿದೆ. ಆರೋಪಿಯು ಮಂಗಳೂರು – ಬೆಂಗಳೂರು ರೈಲಿನಲ್ಲಿ ನಿತ್ಯ ಸಂಚರಿಸಿ ಯಾತ್ರಿಕರ ಮೊಬೈಲ್ ಫೋನ್, ಲೇಡೀಸ್ ಬ್ಯಾಗ್ ಕಳವುಗೈಯುತ್ತಿದ್ದ ಎನ್ನಲಾಗಿದೆ. ಆರೋಪಿಯಿಂದ 11 ಮೊಬೈಲ್ ಫೋನ್, 1 ಟ್ಯಾಬ್‌, ಒಂದು ವ್ಯಾನಿಟಿ ಬ್ಯಾಗ್, ಪಾಸ್ ಪೋರ್ಟ್ ಸೇರಿದಂತೆ ಬೆಲೆಬಾಳುವ ದಾಖಲೆಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.






 

 

error: Content is protected !!
Scroll to Top