ಹಾರಿಕಾ ಮಂಜುನಾಥ್ ರಿಂದ ಅಝಾನ್ ಬಗ್ಗೆ ಸುಳ್ಳಾರೋಪ..! ➤ ಪಿಎಫ್ ಐ ಬೆಳ್ತಂಗಡಿ ವತಿಯಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 24. ವಿಶ್ವ ಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ವತಿಯಿಂದ ನಗರದಲ್ಲಿ ನಡೆದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಎಂಬಾಕೆ ಅಝಾನ್ ನ ಅರ್ಥವನ್ನು ದುರ್ ವ್ಯಾಖ್ಯಾನ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿ ಹಿಂದು-ಮುಸ್ಲಿಮರ ನಡುವೆ ಭಿನ್ನತೆಯನ್ನು ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿ FIR ದಾಖಲು ಮಾಡಲಾಯಿತು.

ಡಿಸೆಂಬರ್ 13 ರಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಮಂಡಳಿ, ದುರ್ಗಾ ವಾಹಿನಿ ಬೆಳ್ತಂಗಡಿಯಲ್ಲಿ ಆಯೋಜಿಸಿದ್ದ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಎಂಬಾಕೆ ಭಾಷಣ ಮಾಡುತ್ತಾ ಅಝಾನ್ ನ ಬಗ್ಗೆ ದುರ್ವಾಖ್ಯಾನ ಮಾಡಿ ಅಝಾನ್ ನಲ್ಲಿ ಕಾಫಿರ್ ಗಳನ್ನು ಅಥವಾ ಮುಸ್ಲಿಮೇತರನ್ನು ಕೊಲ್ಲಿ ಎಂದು ಕರೆ ನೀಡಲಾಗುತ್ತದೆ ಎಂದು ಪ್ರಚೋದನಕಾರಿ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಳು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಹಲವಾರು ಮುಸ್ಲಿಂ ಸಂಘಟನೆಗಳ ಮುಖಂಡರು, ಹಲವು ಮಸೀದಿಗಳ ಸಮಿತಿ ಸದಸ್ಯರು ಪೋಲಿಸ್ ದೂರು ನೀಡಿದ್ದರು, ಈ ದೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯ ಶಬೀರ್ ಎಂಬವರು ನೀಡಿದ ದೂರಿನ ಮೇಲೆ ಬೆಳ್ತಂಗಡಿ ಪೋಲಿಸರು FIR ದಾಖಲಿಸಿದ್ದಾರೆ.

Also Read  ವಿಟ್ಲ : ರಸ್ತೆ ಬದಿ ನಿಂತಿದ್ದ ಬಾಲಕಿಗೆ ಬೈಕ್ ಢಿಕ್ಕಿ    ➤ ಗಂಭೀರ ಗಾಯ…!!!               

 

error: Content is protected !!
Scroll to Top