ಸುಳ್ಯ: ವೃದ್ದ ಮಹಿಳೆಗೆ ಸ್ಕೂಟರ್ ಢಿಕ್ಕಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 22. ವೃದ್ದ ಮಹಿಳೆಯೋರ್ವರಿಗೆ ಸ್ಕೂಟಿ ಢಿಕ್ಕಿ ಹೊಡೆದು ಪರಿಣಾಮ ಮಹಿಳೆ ಹಾಗೂ ಸ್ಕೂಟಿ ಸವಾರ ಗಂಭೀರ ಗಾಯಗೊಂಡ ಘಟನೆ ಹರಿಹರದಿಂದ ನಡೆದಿದೆ.


ಕೊಲ್ಲಮೊಗ್ರ ಕಡೆಯಿಂದ ಬರುತ್ತಿದ್ದ ಸ್ಕೂಟಿಗೆ ದನಗಳು ಅಡ್ಡಬಂದಿದ್ದು, ತಕ್ಷಣವೇ ಸವಾರ ಸ್ಕೂಟಿಯನ್ನು ರಸ್ತೆಯ ಪಕ್ಕಕ್ಕೆ ತೆಗೆದಿದ್ದು, ಅದೇ ಸಂದರ್ಭ ಅಲ್ಲಿ ನಡೆದುಕೊಂಡು ಬರುತ್ತಿದ್ದ ಪುಟ್ಟಮ್ಮ ಎಂಬವರಿಗೆ ಢಿಕ್ಕಿ ಹೊಡೆದಿದೆ. ಘಟನೆಯಿಂದ ಮಹಿಳೆ ಹಾಗೂ ಸವಾರನಿಗೆ ಗಾಯಗಳಾಗಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಕರಾವಳಿಗೆ ರೆಡ್‌ ಅಲರ್ಟ್‌ ➤ ಮುಂದಿನ 3-4 ದಿನ ಭಾರಿ ಮಳೆ ಮುನ್ಸೂಚನೆ!

error: Content is protected !!
Scroll to Top