ಕಡಬ: ನಾಳೆ (ಡಿ. 23) ವಿಹಿಂಪ ಭಜರಂಗದಳ ವತಿಯಿಂದ ಧರ್ಮ ರಕ್ಷಾ ದಿವಸ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ. 22. ವಿಹಿಂಪ ಭಜರಂಗದಳ ಪುತ್ತೂರು ಇದರ ನೇತೃತ್ವದಲ್ಲಿ ಮತಾಂತರದ ವಿರುದ್ದ ಹೋರಾಟ ಮಾಡಿ ಬಲಿದಾನಗೈದ ಶ್ರೀ ಶ್ರದ್ದಾನಂದ ಸ್ವಾಮೀಜಿಯವರ ಬಲಿದಾನ ದಿನದಂದು ಧರ್ಮ ರಕ್ಷಾ ದಿವಸ್ ಕಾರ್ಯಕ್ರಮವನ್ನು ನಾಳೆ (ಡಿ. 23) ರಂದು ಸಂಜೆ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.


ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಧರ್ಮ ಪ್ರಸಾರ ವಿಭಾಗದ ಪ್ರಾಂತ ಪ್ರಮುಖ್ ಕೃಷ್ಣಮೂರ್ತಿ ಹಾಗೂ ವಿಹಿಂಪ ಜಿಲ್ಲಾ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ವಿಹಿಂಪ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಉಳ್ಳಾಲ: ಯಶಸ್ವಿ ಬ್ಲಡ್ ಹೆಲ್ಪ್ ಕೇರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

 

error: Content is protected !!
Scroll to Top