ಪತ್ನಿ ತವರುಮನೆಗೆ ಹೋಗಿದ್ದ ಸಂದರ್ಭ ಪತಿ ಕಾಣೆ..! ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 22. ಹೆಂಡತಿ ತವರುಮನೆಗೆ ಹೋಗಿದ್ದ ಸಂದರ್ಭ ಪತಿ ಸಂಶುದ್ದೀನ್ ಎಂಬಾತನೋರ್ವ ಮನೆಬಿಟ್ಟು ಹೋದ ಘಟನೆ ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ಎಂಬಲ್ಲಿ ನಡೆದಿದೆ.


ಪತ್ನಿ ಹಾಗೂ ಎರಡು ಗಂಡುಮಕ್ಕಳೊಂದಿಗೆ ವಾಸವಾಗಿದ್ದ ಸಂಶುದ್ದೀನ್ ಅವರ ಪತ್ನಿ ಸುಮಾರು ಎರಡು ತಿಂಗಳ ಹಿಂದೆ ತವರುಮನೆಗೆ ಹೋಗಿದ್ದು ಪ್ರತೀದಿನ ಪತಿಯೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದರು ಎನ್ನಲಾಗಿದೆ. ಡಿ.‌ 18ರಂದು ಪತಿ ಯಾವುದೇ ಕರೆ ಮಾಡದೇ ಇದ್ದು, ಡಿ. 19 ರಂದು ಪತ್ನಿ ಸಂಶುದ್ದೀನ್ ಅವರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಇದರಿಂದ ಸಂಶಯಗೊಂಡ ಪತ್ನಿ ಸುನ್ನತ್ ಕೆರೆ ಎಂಬಲ್ಲಿರುವ ಗಂಡನ ಮನೆಗೆ ಬಂದಾಗ ಬೀಗ ಹಾಕಿದ್ದು, ಬೀಗ ತೆರೆದು ಒಳಗೆ ನೋಡಿದಾಗ ಮನೆಯಲ್ಲಿರೋ ವಸ್ತುಗಳೆಲ್ಲ ಕಾಣೆಯಾಗಿದ್ದವು. ಇತ್ತ ಪತಿಯು ಫೋನ್ ಸ್ವಿಚ್ ಆಫ್ ಮಾಡಿದ್ದು, ಇದುವರೆಗೆ ಫೋನ್ ಮಾಡದೇ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾನೆ ಎಂದು ಪತ್ನಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

Also Read  ಹಾಸನ: ತಡೆಗೋಡೆಗೆ ಢಿಕ್ಕಿ ಹೊಡೆದು ಐರಾವತ ಬಸ್ ಪಲ್ಟಿ ► ಗಂಡಿಬಾಗಿಲಿನ ವಿದ್ಯಾರ್ಥಿನಿ ಸೇರಿ 8 ಜನ ಮೃತ್ಯು, 10 ಮಂದಿ ಗಂಭೀರ

 

 

 

error: Content is protected !!
Scroll to Top