ಯುವ ಕವಯಿತ್ರಿ ರಶ್ಮಿ ಸನಿಲ್ ಅವರಿಗೆ ಹ್ಯಾಟ್ರಿಕ್ ರಾಜ್ಯ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಮಂಡ್ಯ, ಡಿ. 21. ಜಿಲ್ಲೆಯ ಗಾಂಧಿಭವನದಲ್ಲಿ ಡಿ. 18ರಂದು ನಡೆದ ಕಸ್ತೂರಿ ಸಿರಿಗನ್ನಡ ವೇದಿಕೆಯ ಕವಿಗೋಷ್ಠಿ ಹಾಗೂ ಕಡಲು ಪುಸ್ತಕ ಬಿಡುಗಡೆ ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ಮಂಗಳೂರಿನ ಯುವ ಕವಯಿತ್ರಿ ರಶ್ಮಿ ಸನಿಲ್ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಒಂದು ವರ್ಷದಲ್ಲಿ ಸತತವಾಗಿ 3 ರಾಜ್ಯ ಪ್ರಶಸ್ತಿ ಪಡೆದು ಹ್ಯಾಟ್ರಿಕ್ ಪ್ರಶಸ್ತಿ ಮುಡಿಗೇರಿಸಿಕೊಂಡು ಮಂಗಳೂರಿಗೆ ಕೀರ್ತಿ ತಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರಾದ ಪೋತೆರ ಮಹದೇವು ಹಾಗೂ ಮುಖ್ಯ ಅತಿಥಿಗಳಾದ ನಗರತ್ನಮ್ಮ, ಹುಲಿಯೂರು ದುರ್ಗಾ ಲಕ್ಷ್ಮೀ ನಾರಾಯಣ್, ಡಾ ಶಿವಕುಮಾರ್ ಗೌಡ, ಹೆಚ್ ಆರ್ ಅರವಿಂದ್, ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಕಡಲ್ಕೊತೆರ ಪ್ರದೇಶಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ, ಪರಿಶೀಲನೆ

 

 

 

error: Content is protected !!
Scroll to Top