ಶಿರಾಡಿ ಘನತ್ಯಾಜ್ಯ ಘಟಕಕ್ಕೆ ಕಾಯ್ದಿರಿಸಿದ ಜಾಗ ಅತಿಕ್ರಮಣ ➤ ಪೊಲೀಸ್ ಬಂದೋಬಸ್ತ್ ಮೂಲಕ ತೆರವು

(ನ್ಯೂಸ್ ಕಡಬ) newskadaba.com ಶಿರಾಡಿ, ಡಿ. 22. ಶಿರಾಡಿ ಗ್ರಾ.ಪಂ. ವ್ಯಾಪ್ತಿಯ ಪದಂಬಳ ಎಂಬಲ್ಲಿ ಗ್ರಾ.ಪಂ.ನ ಘನತ್ಯಾಜ್ಯ ಘಟಕಕ್ಕೆಂದು ಮಂಜೂರುಗೊಳಿಸಲಾಗಿದ್ದ ಸರಕಾರಿ ಜಾಗದ ಅತಿಕ್ರಮಣವನ್ನು ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಪಂಚಾಯತ್ ವತಿಯಿಂದ ತೆರವುಗೊಳಿಸಲಾಯಿತು.


ಶಿರಾಡಿ ಗ್ರಾಮದ ಪದಂಬಳದಲ್ಲಿ ಸರ್ವೇ ನಂಬರ್ 87/1 ರ ಪೈಕಿ 50 ಸೆಂಟ್ಸ್ ಜಾಗವನ್ನು ಪಂಚಾಯತ್ ನ ಘನತ್ಯಾಜ್ಯ ಘಟಕಕ್ಕೆ ಎಂದು ಕಾಯ್ದಿರಿಸಲಾಗಿತ್ತು. ಆದರೆ ಇದನ್ನು ಸ್ಥಳೀಯ ವ್ಯಕ್ತಿಯೋರ್ವ ಅತಿಕ್ರಮಿಸಿಕೊಂಡಿದ್ದು, ಈ ಹಿನ್ನೆಲೆ ನೆಲ್ಯಾಡಿ ಹೊರಠಾಣಾ ಪೊಲೀಸರ ಬಂದೋಬಸ್ತ್ ಮೂಲಕ ಜೆಸಿಬಿ ಬಳಸಿ ತೆರವುಗೊಳಿಸಲಾಯಿತು. ಈ ಸಂದರ್ಭ ಶಿರಾಡಿ ಗ್ರಾ.ಪಂ. ಪಿಡಿಒ ವೆಂಕಟೇಶ್, ಗ್ರಾಮಕರಣಿಕ ಸಂತೋಷ್, ಗ್ರಾ.ಪಂ. ಅಧ್ಯಕ್ಷೆ ವನಿತಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Also Read  ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಆ್ಯಂಟಿ ರೇಬಿಸ್ ಲಸಿಕೆ ನೀಡಲು ಆದೇಶ

 

error: Content is protected !!
Scroll to Top