(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 22. ಭಾರತವನ್ನು ವಿರೋಧಿ ಪ್ರಚಾರ ನಡೆಸುತ್ತಿದ್ದ ಪಾಕಿಸ್ತಾನದ 20 ಯೂಟ್ಯೂಬ್ ಚಾನೆಲ್ ಹಾಗೂ ಎರಡು ವೆಬ್ ಸೈಟ್ ಗಳನ್ನು ಕೇಂದ್ರವು ನಿಷೇಧಿಸಿದೆ.
ಈ ಚಾನೆಲ್ ಗಳು ಸುಮಾರು 35 ಲಕ್ಷ ಚಂದಾದಾರರನ್ನು ಹೊಂದಿದ್ದು, ಅದರಲ್ಲಿ ಭಾರತಕ್ಕೆ ಸಂಬಂಧಿಸಿದ ವಿಷಯಗಳನ್ನು ಸುಮಾರು 50 ಕೋಟಿಗೂ ಅಧಿಕ ಸಲ ವೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಕುರಿತು ಯೂಟ್ಯೂಬ್ ಮತ್ತು ದೂರಸಂಪರ್ಕ ಇಲಾಖೆಗೆ ಪತ್ರ ಬರೆದಿದ್ದ ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಅಪೂರ್ವಚಂದ್ರ ಅವರು, ಪಾಕಿಸ್ತಾನದ ಈ ಯೂಟ್ಯೂಬ್ ಚಾನೆಲ್ ಗಳು ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆಯನ್ನುಂಟು ಮಾಡಿದ್ದು, ಇದರಿಂದಾಗಿ ಅವುಗಳನ್ನು ತಕ್ಷಣ ಪಡೆಯುವಂತೆ ತಿಳಿಸಿದ್ದರು.