ಆತೂರು: ರೇಂಜ್ ಮಟ್ಟದ ಮುಸಾಬಖ- 21 ➤ ತದ್ಬೀರುಲ್ ಇಸ್ಲಾಂ ಕೇಂದ್ರ ಮದರಸ ಚಾಂಪಿಯನ್

(ನ್ಯೂಸ್ ಕಡಬ) newskadaba.com ಆತೂರು, ಡಿ. 21. ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದರಸ ಮ್ಯಾನೇಜ್ಮೆಂಟ್ ಆತೂರು ರೇಂಜ್ ಇದರ ವತಿಯಿಂದ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ವಿಧ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುವ ಮದರಸ ವಿದ್ಯಾರ್ಥಿಗಳ “ಮುಸಾಬಖ-21 (ವಿದ್ಯಾರ್ಥಿ ಫೆಸ್ಟ್)” ಡಾ ಶಾಹ್ ಉಸ್ತಾದ್ ಮಕ್ಬರ ಝಿಯಾರತ್ ನೊಂದಿಗೆ ಶಂಸುಲ್ ಉಲಮಾ ನಗರ ಖುತುಬಿಯಾ ಜುಮಾ ಮಸೀದಿ ಗಂಡಿಬಾಗಿಲು ಮಸೀದಿ ವಠಾರದಲ್ಲಿ ನಡೆಯಿತು. ಸ್ಥಳೀಯ ಜಮಾಹತ್ ಅಧ್ಯಕ್ಷರಾದ ಆದಂ ಹಾಜಿ ಪೋರಿಂಗ ಧ್ವಜಾರೋಹಣ ನೆರವೇರಿಸಿದರು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಸಾಬಖ ಸಂಚಾಲಕರಾದ ಹಸೈನಾರ್ ಹಾಜಿ ಗಂಡಿಬಾಗಿಲು ಅಧ್ಯಕ್ಷತೆ ವಹಿಸಿದರು. ಸ್ಥಳೀಯ ಖತೀಬ್ ಅಬ್ದುಲ್ ಹಮೀದ್ ಫೈಝಿ ಗಂಡಿಬಾಗಿಲು ಉದ್ಘಾಟನೆ ಮಾಡಿದರು. ಮುನೀರ್ ಅನ್ವರಿ ಕುಂಡಾಜೆ ಪ್ರಾಥನೆ ಮಾಡಿದರು. ಸಿ ಎಂ ಇಬ್ರಾಹಿಂ ಕೌಸರಿ ಸ್ವಾಗತಿಸಿದರು. ಸಂಜೆ ನಡೆದ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಹಾಗೂ ಸಮಾರೂಪ ಸಮಾರಂಭದಲ್ಲಿ ರೇಂಜ್ ಮ್ಯಾನೇಜ್ ಮೆಂಟ್ ಅಧ್ಯಕ್ಷರಾದ, ಬಿ ಕೆ ಅಬ್ದುಲ್ ರಝಾಕ್ ಆತೂರು ಅಧ್ಯಕ್ಷತೆ ವಹಿಸಿದರು. ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆ.ಎಂ.ಎಚ್ ಫಾಝಿಲ್ ಹನೀಫಿ ಅನುಸ್ಮರಣಾ ಭಾಷಣ ಮಾಡಿದರು.

Also Read  ದ.ಕ ಜಿಲ್ಲೆಯಾದ್ಯಂತ ಜು. 29ರ ಮಧ್ಯರಾತ್ರಿವರೆಗೆ ಮದ್ಯದಂಗಡಿ ಮುಚ್ಚಲು ಆದೇಶ

ರೇಂಜ್ ಮಟ್ಟದ ಮುಸಾಬಖ -21 ತದ್ಬೀರುಲ್ ಇಸ್ಲಾಂ ಕೇಂದ್ರ ಮದ್ರಸ ಆತೂರು ಚಾಂಪಿಯನ್ ಪಡೆಯಿತು. ಖಮರುಲ್ ಇಸ್ಲಾಂ ಮದ್ರಸ ಆತೂರುಬೈಲು ರನ್ನರ್ ಸ್ಥಾನವನ್ನು ಅಲಂಕರಿಸಿತು. ಗಣ್ಯರಿಂದ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ನಿಯಾಝ್ ದಾರಿಮಿ ಕುದ್ಲೂರು, ಅಬ್ದುಲ್ ಖಾದರ್ ಅಶ್ಯಾಫಿ, ಹಂಝ ಸಖಾಫಿ, ಅಬ್ದುಲ್ಲಾ ಮುಸ್ಲಿಯಾರ್, ರಝಾಕ್ ದಾರಿಮಿ, ಇಸಾಕ್ ಮುಸ್ಲಿಯಾರ್, ಬಶೀರ್ ಮುಸ್ಲಿಯಾರ್, ಆರಿಫ್ ಫೈಝಿ, ಮೂಸಾ ಮುಸ್ಲಿಯಾರ್, ಅಬ್ದುಲ್ ಹಮೀದ್ ಮುಸ್ಲಿಯಾರ್, ಅಬ್ದುಲ್ ರಹಿಮಾನ್ ಅರ್ಶದಿ, ಅಬೂ ಸ್ವಾಲಿಹ್ ಝೈನಿ, ಶರೀಫ್ ಅರ್ಶದಿ, ಎಚ್ ಅಹ್ಮದ್ ಕುಂಞಿ ಆತೂರು, ಅಬ್ದುಲ್ ಆಝೀಝ್ ಬಿ ಕೆ, ಹಾಜಿ ಮುಹಮ್ಮದ್ ರಫೀಕ್ ಗಂಡಿಬಾಗಿಲು, ಹೈದರ್ ಕಲಾಯಿ, ಆದಂ ಹಾಜಿ ಪಿಲಿಕುಡೆಲ್, ಆದಂ ಹಾಜಿ ಗಂಡಿಬಾಗಿಲು, ಇಸಾಕ್ ಕೆಮ್ಮಾರ, ಫಲುಳುದ್ದೀನ್ ಹೇಂತಾರ್, ಇಸ್ಮಾಯಿಲ್ ನೂಜೋಲು, ಹಮೀದ್ ಕೆ, ಸಿರಾಜ್ ಬಡ್ಡಮೆ, ಯೂಸುಫ್ ನೀರಾಜೆ, ಎ.ಕೆ ಬಶೀರ್, ಎನ್ ಸಿದ್ದೀಕ್, ಕೆ ವೈ ಇಸ್ಮಾಯಿಲ್ ಕೂದ್ಲುರು, ಬಿ ಆರ್ ಅಬ್ದುಲ್ ಖಾದರ್, ಆಸೀಫ್ ಜಿ.ಎಂ, ಮುಹಮ್ಮದ್, ಮುಹಮ್ಮದ್ ಕುಂಡಾಜೆ, ಝಕರಿಯಾ ಮುಸ್ಲಿಯಾರ್, ಹುಸೈನ್ ಬಡಿಲ, ನಝೀರ್ ಕೊಯಿಲ, ಪತ್ರಕರ್ತ ಅಝೀಝ್ ಹಲ್ಯಾರ, ಲತೀಫ್ ಗಂಡಿಬಾಗಿಲು, ಅಶ್ರಫ್ ಕೋರೆಪದವು, ಉಮರುಲ್ ಫಾರೂಕ್, ಜೈನುದ್ದೀನ್ ಆತೂರು ಖಲಂದರ್ ಗಂಡಿಬಾಗಿಲು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ SKSSF ವಿಖಾಯ ಕೊರೋನಾ ವಾರಿಯರ್ಸ್ ಗಳನ್ನು ಸನ್ಮಾನಿಸಲಾಯಿತು. ರೇಂಜ್ ಕಾರ್ಯದರ್ಶಿ ಕೆ.ಎಂ. ಸಿದ್ದೀಕ್ ಫೈಝಿ ಕರಾಯ ಸ್ವಾಗತಿಸಿ, ರಫೀಕ್ ಅರ್ಶದಿ ಧನ್ಯವಾದಗೈದರು. ಶಂಸುದ್ದೀನ್ ಹುದವಿ, ಎ.ಪಿ ಅಶ್ರಫ್ ಮುಸ್ಲಿಯಾರ್, ಅನ್ಸಾರ್ ಅಝ್ಹರಿ, ಬದ್ರುದ್ದೀನ್ ಮುಸ್ಲಿಯಾರ್ ಹಾಗೂ ಮುನೀರ್ ಆತೂರು ಕಾರ್ಯಕ್ರಮದ ನಿರ್ವಹಣೆ ಮಾಡಿದರು.

Also Read  ಇನ್ಮುಂದೆ ಗ್ರಾ.ಪಂ. ಗಳಲ್ಲೇ ಸಿಗಲಿದೆ ಜಾತಿ- ಆದಾಯ ಪ್ರಮಾಣಪತ್ರ..! ➤ ಗ್ರಾಮೀಣ ಜನತೆಗೆ ಸಿಹಿಸುದ್ದಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

 

 

error: Content is protected !!
Scroll to Top