ಮಂಗಳೂರು: ಪಿ.ಎ ಎಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ಡಾ.ಪಿ.ಎ ಇಬ್ರಾಹಿಂ ಹಾಜಿ ವಿಧಿವಶ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಇಲ್ಲಿನ ನಡುಪದವುನಲ್ಲಿರುವ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ, ಉದ್ಯಮಿ ಡಾ.ಪಿ.ಎ ಇಬ್ರಾಹಿಂ ಹಾಜಿ(78) ಮಂಗಳವಾರದಂದು ಕೇರಳದ ಕ್ಯಾಲಿಕಟ್ ನಲ್ಲಿ ನಿಧನರಾಗಿದ್ದಾರೆ‌.

ಡಾ.ಪಿಎ ಇಬ್ರಾಹಿಂ ಹಾಜಿ ಶಿಕ್ಷಣ ಪ್ರೇಮಿಯಾಗಿದ್ದ ಇವರು, ಮಲಬಾರ್ ಗೋಲ್ಡ್ ಗ್ರೂಪ್‌ನ ವೈಸ್ ಚೆಯರ್ ಮಾನ್ ಆಗಿದ್ದರು. ಪಿಎ ಕಾಲೇಜು ಸಹಿತ ಹಲವು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ್ದ ಇವರಿಗೆ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು.‌ ಕೆಲವು ದಿನಗಳ ಹಿಂದೆ ದುಬೈಗೆ ತೆರಳಿದ್ದ ಇವರು ಅನಾರೋಗ್ಯಕ್ಕೀಡಾಗಿದ್ದು, ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಪಿಎ ಇಬ್ರಾಹಿಂ ಹಾಜಿ ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಊರಿಗೆ ಕರೆತರಲಾಗಿದ್ದು, ಇಂದು ಬೆಳಗ್ಗೆ ಸ್ವಗೃಹದಲ್ಲೇ ನಿಧನರಾಗಿದ್ದಾರೆ.

Also Read  ಕಾರಿನೊಳಗೆ ಕುಳಿತ ಸ್ಥಿತಿಯಲ್ಲಿಯೇ ಯುವಕ ಮೃತ್ಯು..!

error: Content is protected !!
Scroll to Top