ಮಂಗಳೂರು ಗೋಲಿಬಾರ್- ಪೋಲಿಸ್ ಕ್ರೌರ್ಯತೆಗೆ ಎರಡು ವರ್ಷ..! ➤ ಕ್ಯಾಂಪಸ್ ಫ್ರಂಟ್ ಪ್ರತಿಭಟನಾ ಪ್ರದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಡಿಸೆಂಬರ್ 19, 2019ರಂದು ಮಂಗಳೂರಿನಲ್ಲಿ ಸಿಎಎ ಹಾಗೂ ಎನ್ಆರ್ ಸಿ ವಿರುಧ್ದ ಶಾಂತಿಯುತ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿ ಎರಡು ಅಮಾಯಕ ಜೀವವನ್ನು ಬಲಿತೆಗೆದ ಪೋಲಿಸ್‌ ಕ್ರೌರ್ಯತೆಗೆ ಎರಡು ವರ್ಷಗಳಾಗಿದ್ದು, ಅದನ್ನು ಮರು ನೆನಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮಾತನಾಡಿ, ಈ ಒಂದು ದಿನವನ್ನು ನಾವೆಂದೂ ಮರೆಯುವುದಿಲ್ಲ, ಜಿಲ್ಲೆಗೆ ಇದೊಂದು ಕರಾಳ ದಿನವಾಗಿದೆ. ಅಮಾಯಕ ನೌಶೀನ್ ಹಾಗೂ ಜಲೀಲ್ ರನ್ನು ಗೋಲಿಬಾರ್ ನಡೆಸಿ ಕೊಂದಂತಹ ಪೋಲಿಸ್ ಕ್ರೂರರಿಗೆ ಹಾಗೂ ನೇತೃತ್ವ ನೀಡಿದ ಅಂದಿನ ಕಮಿಷನರ್ ಹರ್ಷರವರಿಗೆ ಕಾನೂನಿನ ಮುಖಾಂತರ ಉತ್ತರ ನೀಡಿಯೇ ತೀರುವೆವು ಎಂದರು. ನಂತರ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ ಮಾತನಾಡಿ, ನಿಮ್ಮ ಲಾಠಿಯ ಮುಖಾಂತರ, ಗೋಲಿಬಾರ್ ಗಳ ಮುಖಾಂತರ ಇಂತಹ ನ್ಯಾಯಪರ ಹೋರಾಟಗಳನ್ನು ಧಮನಿಸಬಹುದೆಂಬ ನಿಮ್ಮಯ ಹಗಲು ಕನಸು ಬಿಟ್ಟುಬಿಡಿ, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಮೊನ್ನೆಯ ರೈತರ ಹೋರಾಟದವರೆಗೆ ಹೋರಾಟಗಳು ಸೋತಿಲ್ಲ, ಸೋಲುವುದು ಕೂಡಾ ಇಲ್ಲ ಎಂದರು.

Also Read  ಬಂಟ್ವಾಳ: ಅನಾರೋಗ್ಯದಿಂದ ಹಿಂದೂ ಸಂಘಟನೆಯ ಯುವಕ ಮೃತ್ಯು

ಈ ಸಂದರ್ಭದಲ್ಲಿ ಮಂಗಳೂರು ನಗರ ಜಿಲ್ಲಾಧ್ಯಕ್ಷ ಸರಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ಜಿಲ್ಲಾ ಮುಖಂಡರಾದ ಅರ್ಫೀದ್ ಅಡ್ಕಾರ್, ರಿಯಾಝ್ ಅಂಕತ್ತಡ್ಕ, ಅಶ್ಫಾಕ್ ಬಂಟ್ವಾಳ, ಫಯಾಝ್ ವಿಟ್ಲ, ಸರ್ಫರಾಝ್ ಅಂಗರಗುಂಡಿ, ಮುಕ್ತಾರ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಮುಖಂಡ ಶಂಸುದ್ದೀನ್ ನಿರೂಪಿಸಿದರು.

ಗೋಲಿಬಾರ್ ಅಣುಕು ಪ್ರದರ್ಶನ
ಪ್ರತಿಭಟನಾ ಸ್ಥಳದಲ್ಲೇ ಗೋಲಿಬಾರ್ ನಡೆಸಿದ ಘಟನೆಯನ್ನು ಅಣುಕು ಪ್ರದರ್ಶನದ ಮೂಲಕ ಮತ್ತೆ ಪೋಲಿಸ್ ಕ್ರೌರ್ಯತೆಯನ್ನು ನೆನಪಿಸಲಾಯಿತು.

Also Read  ಲಾರಿ ಢಿಕ್ಕಿ- ಯುವಕ ಮೃತ್ಯು

error: Content is protected !!
Scroll to Top