ಅಂತಿಮ ಪದವಿ ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ➤ ಪ್ರಿಯಕರ ಅಂದರ್..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 21. ಎಂಬಿಬಿಎಸ್ ಪದವಿ ಮುಗಿಸಿದ ಪ್ರೇಮಿಗಳಿಬ್ಬರ ನಡುವಿನ ಪ್ರೀತಿಯಲ್ಲಿ ಬಿರುಕು ಕಾಣಿಸಿಕೊಂಡು ಡಿಪ್ರೆಷನ್ ಗೆ ಒಳಗಾದ ವಿದ್ಯಾರ್ಥಿ ಊರಿಗೆ ಹೋಗಿದ್ದು, ಇತ್ತ ಯುವತಿಯು ತಾನು ವಾಸವಾಗಿದ್ದ ವಸತಿಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಪ್ರಿಯಕರನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಸಹಪಾಠಿ ವಿದ್ಯಾರ್ಥಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಸುಜೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಎಂಬಿಬಿಎಸ್ ಮುಗಿಸಿ ಪರೀಕ್ಷೆ ಬರೆಯುವುದು ಬಾಕಿಯಿತ್ತು. ಇದರ ಮಧ್ಯೆ ಇವರಿಬ್ಬರಿಗೆ ಪ್ರೇಮಾಂಕುರವಾಗಿ ಬಳಿಕ ಇಬ್ಬರ ನಡುವೆಯೂ ಸಂಶಯ ಹುಟ್ಟಿ ಪ್ರೀತಿ ದೂರವಾಗಿತ್ತು. ಇದರಿಂದ ಇಬ್ಬರೂ ಖಿನ್ನತೆಗೊಳಗಾಗಿ ವಿದ್ಯಾರ್ಥಿಯು ಊರಿಗೆ ಮರಳಿದ್ದನು. ಇತ್ತ ಯುವತಿಯು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತು ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ಆತ್ಮಹತ್ಯೆ ಪ್ರಚೋದನೆಯಡಿ ಪ್ರಕರಣ ದಾಖಲಿಸಿದ್ದಾರೆ.

Also Read  ಕೊಣಾಜೆ: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ► ಆರೋಪಿ ತಂದೆ ಮತ್ತು ಬಾಡಿಗೆ ಮನೆಯ ಮಾಲಕನ ಬಂಧನ

error: Content is protected !!
Scroll to Top