(ನ್ಯೂಸ್ ಕಡಬ) newskadaba.com ಸಂಪಾಜೆ, ಡಿ. 21. ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನೂತನ ಕಸ ಸಾಗಾಟ ವಾಹನಕ್ಕೆ ಗ್ರಾಮ ಪಂಚಾಯತ್ ಆವರಣದಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೈೂಂಗಾಜೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಸ್ವಚ್ಛತಾ ಸಮಿತಿ ಕಾರ್ಯದರ್ಶಿ ಮಂಜುನಾಥ್ ರವರು ವಾಹನ ಚಾಲನೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಟಿ.ಎಮ್. ಶಹೀದ್ ತೆಕ್ಕಿಲ್, ಸಂಪಾಜೆ ಪಂಚಾಯತ್ 2 ಬಾರಿ ಗಾಂಧಿ ಗ್ರಾಮ ಪಡೆಯುವ ಮೂಲಕ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು ಎಲ್ಲಾ ಸದಸ್ಯರುಗಳು ಸೋಮಶೇಖರ್ ಕೊಯಿಂಗಾಜೆ ನೇತೃತ್ವದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಮೂಲಕ ಮಾದರಿ ಗ್ರಾಮ ಪಂಚಾಯತ್ ಆಗಿ ಮೂಡಿ ಬಂದಿದೆ ಎಂದು ಶುಭ ಹಾರೈಕೆ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆ ವಹಿಸಿ ಸಹಕಾರ ನೀಡಿದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಿದರು. ಉದ್ಘಾಟನೆ ಮಾಡಿ ಮಾತನಾಡಿದ ಸೋಮಶೇಖರ್ ಕೊಇಂಗಾಜೆ ಜನ ಪರ ಕೆಲಸ ಮಾಡುವ ಮೂಲಕ ಪಂಚಾಯತ್ ಒಳ್ಳೆಯ ಕೆಲಸ ಮಾಡುತ್ತಿದ್ದು ನಾನು ಸೊಸೈಟಿ ಅಧ್ಯಕ್ಷನಾಗಿ, ಪಂಚಾಯತ್ ಸದಸ್ಯನಾಗಿ ಜಿ. ಕೆ. ಹಮೀದ್ ನೇತೃತ್ವದ ಪಂಚಾಯತ್ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇನೆ ಗ್ರಾಮಕ್ಕೆ ಹೆಸರು ಬರುವ ರೀತಿ ಕೆಲಸ ಮಾಡಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದ್ದು ನನಗೆ ಸಂತೋಷ ತಂದಿದೆ ಎಂದು ಶುಭ ಹಾರೈಸಿದರು. ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ ಮಾತನಾಡಿ ಅತೀ ಶೀಘ್ರ ಸಂಪಾಜೆಯಲ್ಲಿ ಘನ ತ್ಯಾಜ್ಯ ಘಟಕದ ನಿರ್ಮಾಣವಾಗಿ ಸಂಪಾಜೆ ಗ್ರಾಮಕ್ಕೆ ರಾಷ್ಟ್ರ ಪ್ರಶಸ್ತಿ ಬರಲಿ ಎಂದು ಶುಭ ಹಾರೈಕೆ ಮಾಡಿದರು, ಸೊಸೈಟಿ ನಿರ್ದೇಶಕ ಗಣಪತಿ ಭಟ್ ಮಾತನಾಡಿ, ಸಂಪಾಜೆ ಗ್ರಾಮ ಪಂಚಾಯತ್ ಒಳ್ಳೆಯ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿ ತಮ್ಮ ಅವಧಿಯಲ್ಲಿ ಇನ್ನಷ್ಟು ಕೆಲಸ ಆಗಲಿ ಎಂದರು.
ಸಭೆಯಲ್ಲಿ ಪಿಡಿಒ ಸರಿತಾ ಡಿಸೋಜ, ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು, ಅಬೂಸಾಲಿ, ಎಸ್. ಕೆ. ಹನೀಫ್, ಸವಾದ್ ಗೂನಡ್ಕ, ಅನುಪಮಾ, ರಜನಿ, ವಿಮಲಾ ಪ್ರಸಾದ್, ವಿಜಯ ಕುಮಾರ್, ಸುಶೀಲಾ, ಕಲ್ಲುಗುಂಡಿ ಜಮಾಅತ್ ಕಾರ್ಯದರ್ಶಿ ರಝಾಕ್ ಸೂಪರ್, ರಿಯಾಜ್ ಎಸ್.ಎ, ಸುಜಿತ್ ನವಮಿ, ಅಬೂಬಕ್ಕರ್ ಡ್ರೈವರ್, ಸೊಸೈಟಿ ನಿರ್ದೇಶಕ ಹಮೀದ್. ಎಚ್, ಇಂಜಿನಿಯರ್ ಗಳಾದ ರಶ್ಮಿ ಆಕಾಂಶ ರೈ, ಗೋಪಮ್ಮ, ಭರತ್, ಗುರುವ, ಮಧುರ, ಸವಿತಾ, ಹರ್ಷಿತ್, ಕಲ್ಲುಗುಂಡಿ ಸೋಮನಾಥ್ ಶಾಲಾ ಮುಕ್ಯೋಪಾಧ್ಯಾಯರಾದ ಚಂದ್ರಾವತಿ ಉಪಸ್ಥಿತರಿದ್ದರು. ಜಿ. ಕೆ. ಹಮೀದ್ ಸ್ವಾಗತಿಸಿ ಸುಂದರಿ ಮುಂಡಡ್ಕ ವಂದಿಸಿದರು.