ಚಲಿಸುತ್ತಿದ್ದ ಸ್ಕೂಟರ್ ಗೆ ಲಾರಿ ಢಿಕ್ಕಿ ➤ ಅವಳಿ ಮಕ್ಕಳು ಮೃತ್ಯು, ತಂದೆ-ತಾಯಿ ಸ್ಥಿತಿ ಚಿಂತಾಜನಕ…!

(ನ್ಯೂಸ್ ಕಡಬ) newskadaba.com ಹಾಸನ, ಡಿ. 20. ಚಲಿಸುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಬಂದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಅವಳಿ ಮಕ್ಕಳಿಬ್ಬರು ಸ್ಥಳದಲ್ಲೇ ಮೃತಪಟ್ಟು, ತಂದೆ ತಾಯಿ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಹೊರವಲಯದ ರಾ.ಹೆ ಭೂವನಹಳ್ಳಿ ಸಮೀಪ ನಡೆದಿದೆ.

ಮೃತಪಟ್ಟವರನ್ನು ಅವಳಿ ಮಕ್ಕಳಾದ ಪ್ರಣತಿ ಹಾಗೂ ಪ್ರಣವ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಶಿವಾನಂದ್ ಹಾಗೂ ಜ್ಯೋತಿ ದಂಪತಿಯ ಸ್ಥಿತಿ ಚಿಂತಾಜನಕವಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಪ್ರಯಾಣಿಸುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಲಾರಿ ಚಾಲಕ ಮದ್ಯ ಸೇವಿಸಿರುವುದೇ ಘಟನೆಗೆ ಕಾರಣವೆನ್ನಲಾಗಿದೆ. ಈ ಕುರಿತು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಾರ್ಕಳ: ಜೋಕಾಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸಿಲುಕಿ ಬಾಲಕಿ ಮೃತ್ಯು

 

error: Content is protected !!
Scroll to Top