ಮಾಜಿ ಅಥ್ಲೀಟ್ ಓರ್ವರಿಗೆ ಪಿ.ಟಿ. ಉಷಾ ವಂಚನೆ- ದೂರು ದಾಖಲು..!

(ನ್ಯೂಸ್ ಕಡಬ) newskadaba.com ಕೇರಳ, ಡಿ. 20. ಮಾಜಿ ಅಥ್ಲೀಟ್ ಪಿ.ಟಿ.ಉಷಾ ವಿರುದ್ದ ಕೇರಳ ಪೊಲೀಸರು ವಂಚನೆ ಪ್ರಕರಣ ದಾಖಲಿಸಿರುವ ಕುರಿತು ವರದಿಯಾಗಿದೆ.


ಇವರು ಮಾಜಿ ಅಥ್ಲೀಟ್ ಜೆಮ್ಮಾ ಜೋಸೆಫ್ ಅವರಿಗೆ ಬಿಲ್ಡರ್ ಓರ್ವರಿಂದ ಫ್ಲಾಟ್ ಕೊಡಿಸುವುದಾಗಿ ಭರವಸೆ ನೀಡಿ, ಜೆಮ್ಮಾ ಜೋಸೆಫ್ ಅವರಿಂದ ಕಂತುಗಳ ಮೂಲಕ 46 ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಭರವಸೆಯಂತೆ ನಿಗದಿತ ಸಮಯಕ್ಕೆ ಫ್ಲಾಟ್ ನೀಡದೆ ಇದ್ದ ಹಿನ್ನೆಲೆ ಜೆಮ್ಮಾ ಜೋಸೆಫ್ ಅವರು ಪಿ.ಟಿ ಉಷಾ ವಿರುದ್ದ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

Also Read  ಸಾವಯವ ಗೊಬ್ಬರದತ್ತ ರೈತರ ಒಲವು   ➤ ಸಗಣಿಗೂ ಬಂತು ಬಂಗಾರದ ಬೆಲೆ…!

error: Content is protected !!