ಕುಂಡಡ್ಕ ದೈವಸ್ಥಾನಕ್ಕೆ ಬಿಲ್ಲವರ ಪ್ರವೇಶಕ್ಕೆ ನಿರ್ಬಂಧ- ಆರೋಪ ➤ ಬಿಲ್ಲವ ಸಂಘಟನೆಗಳಿಂದ ತೀವ್ರ ಖಂಡನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 18. ದೈವಸ್ಥಾನಕ್ಕೆ ಪ್ರಾರ್ಥನೆಗೆಂದು ತೆರಳಿದ್ದ ಬಿಲ್ಲವ ಸಮಾಜದ ಯುವಕರನ್ನು ಹೊರಗೆ ಕಳುಹಿಸಿದ ಘಟನೆಯೊಂದು ವಿಟ್ಲಮೂಡ್ನೂರು ಗ್ರಾಮದ ಕುಂಡಡ್ಕ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಗ್ರಾಮದ ಪಿಲಿಂಜ ಎಂಬಲ್ಲಿ ನೂತನ ದೈವಸ್ಥಾನ ನಿರ್ಮಾಣಗೊಂಡಿದ್ದು, ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗ್ರಾಮ ಸಂಬಂಧಿತ ದೈವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರ ಜತೆ ಬಿಲ್ಲವ ಸಮಾಜದ ಯುವಕರಿಬ್ಬರು ತೆರಳಿದ್ದು, ದೈವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿ ಅಧ್ಯಕ್ಷರಲ್ಲಿ ದೈವಸ್ಥಾನದ ಒಳಾಂಗಣಕ್ಕೆ ಬಿಲ್ಲವರು ಬರುವಂತಿಲ್ಲ ಎಂದಿದ್ದಾರೆ ಎಂದು ಕೇಳಿಬಂದಿದೆ. ಇದನ್ನು ಕೇಳಿಸಿಕೊಂಡ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯುವಕರನ್ನು ಹೊರ ಹೋಗುವಂತೆ ತಿಳಿಸಿದ್ದು ಯುವಕರು ಈ ವಿಚಾರವನ್ನು ಬಿಲ್ಲವ ಸಮಾಜ ಮುಖಂಡರುಗಳಲ್ಲಿ ತಿಳಿಸಿದ್ದು ಅಲ್ಲದೆ ಇದೇ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ದರು. ಈ ನಡುವೆ ಯುವಕರನ್ನು ಕರೆದುಕೊಂಡು ಹೋಗಿದ್ದ ಅಧ್ಯಕ್ಷರಲ್ಲಿ ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದ್ದರೆನ್ನಲಾಗಿದೆ. ಬಿಲ್ಲವರ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಈ ವಿಚಾರದ ಕುರಿತು ಚರ್ಚೆ ಉಂಟಾಗಿದ್ದು, ಶನಿವಾರದಂದು ಸಂಜೆ ಕುಂಡಡ್ಕ ಹಾಗೂ ವಿಟ್ಲ ವ್ಯಾಪ್ತಿಯ ಬಿಲ್ಲವ ಸಂಘಟನೆಗಳು, ವಿಟ್ಲ ಯುವವಾಹಿನಿ ಸದಸ್ಯರು ಖಂಡನಾ ಸಭೆ ನಡೆಸಿದ್ದವು.

Also Read  ರಾಜ್ಯದಲ್ಲಿ ಇಂದು ದಾಖಲೆಯ 99 ಕೋವಿಡ್ ಪ್ರಕರಣ ದೃಢ

 

ಮತ್ತೆ ದೂರವಾಣಿ ಮೂಲಕ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ವ್ಯಕ್ತಿಯ ಜೊತೆ ಮಾತನಾಡಿದ್ದು, ಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿದ್ದ ಕ್ರಮ ಇದಾಗಿದೆ. ಆದರೆ ಹೊರಗಿನಿಂದ ಬರುವವರನ್ನು ಹೋಗಿ ಎಂದು ಹೇಳಿಲ್ಲ. ಒಂದು ವೇಳೆ ಈ ಘಟನೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Also Read  ಕೆಮ್ಮಾರ ಶಾಲೆಯಲ್ಲಿ ಉಚಿತ ಸೇವೆಗೈದ ಗೌರವ ಉಪನ್ಯಾಸಕಿ ಕು|ಅಝ್ಮಿಯಾಗೆ ಬೀಳ್ಕೊಡುಗೆ

 

error: Content is protected !!
Scroll to Top