ಕರಾವಳಿಗೂ ಕಾಲಿಟ್ಟ ಒಮಿಕ್ರಾನ್…! ➤ ಮಂಗಳೂರಿನ ಐವರು ವಿದ್ಯಾರ್ಥಿಗಳಲ್ಲಿ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18. ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಕಂಡುಬಂದಿದ್ದ ಒಮಿಕ್ರಾನ್ ಪ್ರಕರಣ ಇದೀಗ ಏಕಾಏಕಿಯಾಗಿ ಮಂಗಳೂರಿನಲ್ಲೂ ಕಂಡುಬಂದಿದ್ದು, ಕರಾವಳಿಗರನ್ನು ಆತಂಕಕ್ಕೀಡುಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಮಂಗಳೂರಿನ ಎರಡು ಶಿಕ್ಷಣ ಸಂಸ್ಥೆಗಳ ಒಟ್ಟು ಐದು ಮಂದಿಯಲ್ಲಿ ಒಮಿಕ್ರಾನ್ ಪತ್ತೆಯಾಗಿರುವುದನ್ನು ದೃಢ ಪಟ್ಟಿಸಿದ್ದಾರೆ. ಇಂದು ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಆತಂಕಕಾರಿ ವಿಚಾರವೆಂದರೆ ಇದುವರೆಗೆ ಒಮಿಕ್ರಾನ್ ಸೋಂಕು ಹರಡಿರುವುದರ ದಾಖಲೆ ಪತ್ತೆಯಾಗಿಲ್ಲ.

Also Read  ಕಡಬದಾದ್ಯಂತ ತೀವ್ರಗೊಂಡ ವಿದ್ಯುತ್ ಸಮಸ್ಯೆ! ಜನಪ್ರತಿನಿಧಿಗಳು ಮೌನ! ಕೃಷಿಗೂ ನೀರಿಲ್ಲದೆ ಪರದಾಟ

 

 

error: Content is protected !!
Scroll to Top