ಮುತ್ತಪ್ಪ ರೈ ಆಸ್ತಿ ಹಕ್ಕಿನ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ ➤ ಆಸ್ತಿ ಮಾರಾಟಕ್ಕೆ ಬ್ರೇಕ್…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 18. ಮುತ್ತಪ್ಪ ರೈ ಆಸ್ತಿ ವಿಚಾರವಾಗಿ ಅವರ ಎರಡನೇ ಪತ್ನಿ ಅನುರಾಧಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಕೆಲ ನಿರ್ದಿಷ್ಟ ಆಸ್ತಿಗಳ ಮಾರಾಟಕ್ಕೆ ಹೈಕೋರ್ಟ್ ತಡೆ ನೀಡಿದೆ ಎನ್ನಲಾಗಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿ ಅನುರಾಧಾ ಅವರು ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರ ಏಕಸದಸ್ಯ ಪೀಠ ನಿರ್ದಿಷ್ಟ ಆಸ್ತಿಗಳನ್ನು ನ್ಯಾಯಾಲಯದ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡದಂತೆ ಆದೇಶ ಹೊರಡಿಸಿದೆ. ಈ ನಡುವೆ ಮುತ್ತಪ್ಪ ರೈ ಪುತ್ರರಾದ ರಾಕಿ ರೈ ಹಾಗೂ ರಿಕ್ಕಿ ರೈ ಕೆಲ ಆಸ್ತಿಯನ್ನು ಮಾರಾಟ ಮಾಡಿದ್ದರು. ಆಸ್ತಿ ಮಾರಾಟ ಮಾಡದಂತೆ ನೀಡಿದ್ದ ತಡೆಯಾಜ್ಞೆಯನ್ನು ಈ ಹಿಂದೆ ಸಿವಿಲ್ ಕೋರ್ಟ್ ತೆರವು ಮಾಡಿತ್ತು. ಇದನ್ನು ಪ್ರಶ್ನಿಸಿ ಅನುರಾಧಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Also Read  ಪುತ್ತೂರು: ಬಾವಿಗೆ ಬಿದ್ದ ಜಿಂಕೆ

error: Content is protected !!
Scroll to Top